Select Your Language

Notifications

webdunia
webdunia
webdunia
webdunia

ಅಂಬಾರಿ ಅರ್ಜುನನ ಸಮಾಧಿಗಾಗಿ ಮನವಿ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Darshan

Krishnaveni K

ಬೆಂಗಳೂರು , ಶುಕ್ರವಾರ, 3 ಮೇ 2024 (10:03 IST)
ಬೆಂಗಳೂರು: ಅಂಬಾರಿ ಅರ್ಜುನನ ಸಮಾಧಿ ನಿರ್ಮಾಣಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಸಂದೇಶ ಬರೆದುಕೊಂಡಿದ್ದಾರೆ.

ಕಳೆದ ವರ್ಷ ಅಂಬಾರಿ ಹೊರುತ್ತಿದ್ದ ಆನೆ ಅರ್ಜುನ ಕಾಡಾನೆಗಳ ಜೊತೆಗಿನ ಸಂಘರ್ಷದಲ್ಲಿ ಮೃತಪಟ್ಟಿದ್ದ. ಅವನ ಸಾವಿಗೆ ಕರುನಾಡೇ ಮರುಗಿತ್ತು. ಬಳಿಕ ಸಕಲ ರಾಜಮರ್ಯಾದೆಯಿಂದ ಅರ್ಜುನನ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇದೀಗ ಅವನ ಸಮಾಧಿ ಸ್ಥಳ ಅನಾಥವಾಗಿದೆ.

ಆದಷ್ಟು ಬೇಗ ಅರ್ಜುನನ ಸಮಾಧಿಗೆ ಗೌರವ ಸಿಗುವಂತಾಗಬೇಕು ಎಂದು ದರ್ಶನ್ ಪ್ರಾಣಿಗಳ ಮೇಲಿನ ತಮ್ಮ ಪ್ರೀತಿ ಹೊರಹಾಕಿದ್ದಾರೆ. ‘

ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ.ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು' ಎಂದಿದ್ದಾರೆ.

 
ಅವರ ಈ ಪ್ರಾಣಿ ಮೇಲಿನ ಕಳಕಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದರ್ಶನ್ ಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಮೈಸೂರು ಮೃಗಾಲಯದಲ್ಲಿ ಕೆಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ತಮ್ಮ ಫಾರ್ಮ್ ಹೌಸ್ ನಲ್ಲೂ ಕುದುರೆ, ಹಸು ಸೇರದಿಂತೆ ಪ್ರಾಣಿ-ಪಕ್ಷಿಗಳನ್ನು ಸಾಕುತ್ತಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ಕಾಂತಾರಕ್ಕೆ ರಕ್ಷಿತ್ ಶೆಟ್ಟಿ ಜೊತೆ ರೊಮ್ಯಾನ್ಸ್ ಮಾಡಿದ್ದ ಬೆಡಗಿ ಹೀರೋಯಿನ್