Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿ ಕಾಂತಾರಕ್ಕೆ ರಕ್ಷಿತ್ ಶೆಟ್ಟಿ ಜೊತೆ ರೊಮ್ಯಾನ್ಸ್ ಮಾಡಿದ್ದ ಬೆಡಗಿ ಹೀರೋಯಿನ್

Rukmini Vasanth

Krishnaveni K

ಬೆಂಗಳೂರು , ಗುರುವಾರ, 2 ಮೇ 2024 (10:30 IST)
Photo Courtesy: Twitter
ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಈ ಸಿನಿಮಾದ ನಾಯಕಿ ಯಾರು ಎಂಬ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ. ಮೂಲಗಳ ಪ್ರಕಾರ ರಕ್ಷಿತ್ ಶೆಟ್ಟಿ ಮಾಜಿ ಹೀರೋಯಿನ್ ಕಾಂತಾರ ನಾಯಕಿಯಾಗಲಿದ್ದಾರೆ.

ಕಾಂತಾರ ಸಿನಿಮಾ ಮೊದಲ ಭಾಗದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಅಭಿನಯಿಸಿದ್ದರು. ಆದರೆ ಎರಡನೇ ಭಾಗದಲ್ಲಿ ಸಪ್ತಮಿ ಗೌಡ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಅವರ ಬದಲಾಗಿ ಈಗ ಸಪ್ತಸಾಗರದಾಚೆ ಎಲ್ಲೊ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿದ್ದ ರುಕ್ಮಿಣಿ ವಸಂತ್ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಇದುವರೆಗೆ ರಿಷಬ್ ಕಾಂತಾರ ಚಾಪ್ಟರ್ 1 ಸಿನಿಮಾದ ಪಾತ್ರ ವರ್ಗದ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ರುಕ್ಮಿಣಿ ವಸಂತ್ ಸಪ್ತಸಾಗರದಾಚೆ ಎಲ್ಲೊ ಸಿನಿಮಾದ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಕರ್ನಾಟಕದ ಹೊಸ ಕ್ರಶ್ ಎಂದು ಹೆಸರು ಮಾಡಿದ್ದರು.

ಇದೀಗ ಕಾಂತಾರ ಸಿನಿಮಾಗೆ ರುಕ್ಮಿಣಿಯನ್ನೇ ಕರೆತರಲಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಸದ್ಯಕ್ಕೆ ಚಿತ್ರತಂಡ ಕುಂದಾಪುರದಲ್ಲಿ ವಿಶೇಷ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಮಾಡುತ್ತಿದೆ. ಮೂಲಗಳ  ಪ್ರಕಾರ ಚಿತ್ರದ ಬಜೆಟ್ 125 ಕೋಟಿ ರೂ. ತಲುಪುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಜನೀಕಾಂತ್ ಸಿನಿಮಾ ಕೂಲಿಗೆ ಲೀಗಲ್ ನೋಟಿಸ್ ಕೊಟ್ಟ ಇಳಯರಾಜ