Select Your Language

Notifications

webdunia
webdunia
webdunia
webdunia

ಕಾಂತಾರ ಸಿನಿಮಾಗಾಗಿ ಫಿಲಂ ಸಿಟಿ ಮೀರಿಸುವಂತಹ ಸೆಟ್ ಹಾಕಿದ್ದಾರಂತೆ ರಿಷಬ್ ಶೆಟ್ಟಿ

Kantara 1

Krishnaveni K

ಬೆಂಗಳೂರು , ಮಂಗಳವಾರ, 30 ಏಪ್ರಿಲ್ 2024 (09:46 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಈ ಸಿನಿಮಾಗಾಗಿ ರಿಷಬ್ ಹಾಕಿರುವ ಸೆಟ್ ಬಗ್ಗೆ ಈಗ ಭಾರೀ ಚರ್ಚೆಯಾಗುತ್ತಿದೆ.

ಕಾಂತಾರ ಚಾಪ್ಟರ್ 1 ಸಿನಿಮಾಗಾಗಿ ರಿಷಬ್ ಶೆಟ್ಟಿ ಕುಂದಾಪುರದಲ್ಲೇ ಬೀಡುಬಿಟ್ಟಿದ್ದಾರೆ. ಇಲ್ಲಿಯೇ ವಿಶೇಷ ಸೆಟ್ ಹಾಕಿದ್ದಾರೆ. ರಾಮೋಜಿರಾವ್ ಫಿಲಂಸ್ ಸಿಟಿಯನ್ನೇ ಮೀರಿಸುವಂತಹ ಬೃಹತ್ ಸೆಟ್ ಹಾಕಿದ್ದಾರಂತೆ. ಇಲ್ಲಿಯೇ ಒಳಾಂಗಣದ ಎಲ್ಲಾ ಚಿತ್ರೀಕರಣವೂ ನಡೆಯಲಿದೆ.

ರಿಷಬ್ ಶೆಟ್ಟಿ ಈಗಾಗಲೇ ಚಿತ್ರೀಕರಣ ಆರಂಭಿಸಿದ್ದಾರೆ. ಕುಂದಾಪುರದ ಕಾಡು ಮೇಡಿನಲ್ಲಿ ಈಗಾಗಲೇ ಕೆಲವು ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಉಳಿದಂತೆ ಒಳಾಂಗಣದ ಚಿತ್ರೀಕರಣಗಳು ಇಲ್ಲಿಯೇ ಹಾಕಲಾದ ಬೃಹತ್ ಸೆಟ್ ನಲ್ಲಿ ನಡೆಯಲಿದೆ. ಇದಕ್ಕಾಗಿ ಸಾಕಷ್ಟು ವೆಚ್ಚ ಮಾಡಲಾಗಿದೆ.

ಇಲ್ಲಿಯೇ ಚಿತ್ರೀಕರಣದ ಜೊತೆಗೆ ಎಡಿಟಿಂಗ್, ಡಬ್ಬಿಂಗ್ ಗೂ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಚಿತ್ರೀಕರಣದ ಯಾವುದೇ ಫೋಟೋಗಳೂ ಸೋರಿಕೆಯಾಗದಂತೆ ರಿಷಬ್ ಕ್ರಮ ಕೈಗೊಂಡಿದ್ದಾರೆ. ಮೊದಲನೇ ಹಂತದ ಚಿತ್ರೀಕರಣ 20 ದಿನಗಳ ಕಾಲ ನಡೆಯಲಿದೆ. ಅದಾದ ಬಳಿಕ ಚಿತ್ರತಂಡಕ್ಕೆ ಮತ್ತಷ್ಟು ಖ್ಯಾತ ನಟರ ಸೇರ್ಪಡೆಯಾಗಲಿದೆ. ಆದರೆ ಈ ಬಗ್ಗೆ ಒಂದು ಸಣ್ಣ ಸುಳಿವೂ ಹೊರಬಾರದಂತೆ ರಿಷಬ್ ನೋಡಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರ್ಟ್‌ ಪ್ರಾಕ್‌ನಲ್ಲಿ ಕೀರ್ತಿ ಸುರೇಶ್, ನೀವಿಷ್ಟು ಬದಲಾಗಿದ್ದು ಸಹಿಸಲಾಗುತ್ತಿಲ್ಲ ಎಂದ ನೆಟ್ಟಿಗರು