Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿ ಹಾದಿಯಲ್ಲೇ ರಕ್ಷಿತ್ ಶೆಟ್ಟಿ, ತಮ್ಮೂರಿನಲ್ಲೇ ರಿಚರ್ಡ್ ಆಂಟನಿ ಶೂಟಿಂಗ್

Rakshit Shetty

Krishnaveni K

ಬೆಂಗಳೂರು , ಶನಿವಾರ, 27 ಏಪ್ರಿಲ್ 2024 (12:49 IST)
ಬೆಂಗಳೂರು: ನಟ ರಿಷಬ್ ಶೆಟ್ಟಿ ಹಾದಿಯಲ್ಲೇ ಸ್ನೇಹಿತ ರಕ್ಷಿತ್ ಶೆಟ್ಟಿ ಕೂಡಾ ಸಾಗಲಿದ್ದಾರೆ. ತಮ್ಮ ಮುಂದಿನ ಸಿನಿಮಾ ರಿಚರ್ಡ್ ಆಂಟನಿ ಶೂಟಿಂಗ್ ನ್ನು ತಮ್ಮ ತವರು ಉಡುಪಿಯಲ್ಲೇ ಮಾಡಲು ತೀರ್ಮಾನಿಸಿದ್ದಾರೆ.

ರಿಷಬ್ ಶೆಟ್ಟಿ ಕಾಂತಾರ ಸಿನಿಮಾವನ್ನು ತಮ್ಮ ತವರು ಕುಂದಾಪುರದ ಕೆರಾಡಿಯಲ್ಲೇ ಮಾಡಿದ್ದರು. ಇದೀಗ ಎರಡನೇ ಭಾಗವನ್ನೂ ಅಲ್ಲಿಯೇ ವಿಶೇಷ ಸೆಟ್ ಹಾಕಿಕೊಂಡು ಮಾಡುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಕರಾವಳಿಯ ನಿಜವಾದ ಚಿತ್ರಣವನ್ನು ಕಟ್ಟಿಕೊಟ್ಟರು.

ಇದೀಗ ಸ್ನೇಹಿತ ರಿಷಬ್ ಹಾದಿಯಲ್ಲೇ ರಕ್ಷಿತ್ ಕೂಡಾ ಸಾಗಲಿದ್ದಾರೆ. ಸಪ್ತಸಾಗರದಾಚೆ ಸಿನಿಮಾ ಬಳಿಕ  ರಕ್ಷಿತ್ ರಿಚರ್ಡ್ ಆಂಟನಿ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾವನ್ನು ಅವರು ತಮ್ಮ ತವರು ಉಡುಪಿಯಲ್ಲೇ ಚಿತ್ರೀಕರಣ ನಡೆಸಲಿದ್ದಾರೆ. ಅಷ್ಟೇ ಅಲ್ಲ, ತಮ್ಮ ಊರಿನ ಕಲಾವಿದರನ್ನೇ ಬಳಸಿ ಸಿನಿಮಾ ಮಾಡಲಿದ್ದಾರಂತೆ.

ರಿಷಬ್ ಕೂಡಾ ಕಾಂತಾರದಲ್ಲಿ ಬಹುತೇಕ ಊರಿನ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದರು. ಇದೀಗ ರಕ್ಷಿತ್ ಸಿನಿಮಾದಲ್ಲೂ ಬೆಂಗಳೂರಿನ ಕಲಾವಿದರು ಇರಲ್ವಂತೆ. ಅಂದ ಹಾಗೆ ಮೇ 1 ರಿಂದ ರಕ್ಷಿತ್ ರಿಚರ್ಡ್ ಆಂಟನಿ ಸಿನಿಮಾ ಶೂಟಿಂಗ್ ಆರಂಭಿಸಲು ತೀರ್ಮಾನಿಸಿದ್ದಾರೆ. 1980-90 ರ ದಶಕದಲ್ಲಿ ನಡೆಯುವ ಕತೆ ಇದಾಗಿದ್ದು, ಆ ಕಾಲಘಟ್ಟಕ್ಕೆ ತಕ್ಕಂತೆ ಇಲ್ಲಿಯೇ ಸೆಟ್ ಹಾಕಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಕೆಂದೇ ರಾಮಾಯಣ ಸಿನಿಮಾದ ರಣಬೀರ್ ಕಪೂರ್ ಲುಕ್ ಲೀಕ್ ಮಾಡಿತಾ ಚಿತ್ರತಂಡ