ಬೆಂಗಳೂರು: ಎರಡು ಕ್ವಾರ್ಟರ್ ಕೊಟ್ರೆ ಅವರನ್ನೇ ದೇವರು ಎನ್ನುವವರು ನನ್ನ ತಂದೆ ಎಂದು ತಮ್ಮ ತಂದೆಯ ಆರೋಪಗಳಿಗೆ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ತಿರುಗೇಟು ನೀಡಿದ್ದಾರೆ.
ಚೈತ್ರಾ ತಂದೆ ಬಾಲಕೃಷ್ಣ ನಾಯ್ಕ್ ಮಾಧ್ಯಮಗಳ ಮುಂದೆ ತಮ್ಮ ಮಗಳು ಕಳ್ಳಿ, ಅವಳನ್ನು ಮದುವೆಯಾಗಿರುವ ಅವನೂ ಕಳ್ಳ. ನನ್ನನ್ನ ಮದುವೆಗೆ ಕರೆದಿಲ್ಲ. ನಾನು ಈ ಮದುವೆಯನ್ನು ಒಪ್ಪಲ್ಲ ಎಂದೆಲ್ಲಾ ಆರೋಪ ಮಾಡಿದ್ದರು.
ತಂದೆಯ ಆರೋಪದ ಬೆನ್ನಲ್ಲೇ ಚೈತ್ರಾ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದು ಚೈತ್ರಾಗೆ ತಿರುಗೇಟು ನೀಡಿದ್ದಾರೆ. ಕುಡುಕ ತಂದೆಯಿಂದ ಆಗುವ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು ಎಂದಿದ್ದಾರೆ.
ಕುಡುಕ ತಂದೆಯ ಚಿತ್ರಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾರ್ಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಎನ್ನುವವರ ಮಾತಿಗೆ ಬೆಲೆಕೊಡಬಾರದು ಎಂದು ಬರೆದುಕೊಂಡಿದ್ದಾರೆ.