ಬೆಂಗಳೂರು: ನಿನ್ನೆಯಷ್ಟೇ ಅಗಲಿದ ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿ, ಹಾಸ್ಯ ನಟ ರಾಕೇಶ್ ಪೂಜಾರಿ ತಂಗಿಗಾಗಿ ಈಗ ಕಾಮಿಡಿ ಕಿಲಾಡಿಗಳು ತಂಡ ದೊಡ್ಡ ನಿರ್ಧಾರ ತೆಗೆದುಕೊಂಡಿದೆ.
ಮಂಗಳೂರು ಮೂಲದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಚಿಕ್ಕವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರ ಸಾವು ಎಲ್ಲರ ಶಾಕ್ ಗೆ ಕಾರಣವಾಗಿದೆ. ನಿನ್ನೆ ಅವರ ಸಾವಿನ ಸುದ್ದಿ ತಿಳಿದಾಗಿನಿಂದ ಕಾಮಿಡಿ ಕಿಲಾಡಿಗಳು ಟೀಂ ಅವರ ಮನೆಯವರ ಜೊತೆಯಾಗಿ ನಿಂತಿದೆ.
ಅವರ ಜೊತೆಗೆ ಶೋ ಮಾಡುತ್ತಿದ್ದ ಕಲಾವಿದರು ಗೆಳೆಯನ ಸಾವಿನ ದುಃಖ ತಡೆಯಲಾಗದೇ ಕುಸಿದು ಹೋಗಿದ್ದಾರೆ. ರಾಕೇಶ್ ಗೆ ಓರ್ವ ಸಹೋದರಿಯಿದ್ದು, ಆಕೆಯ ಮದುವೆ ಮಾಡಿಸಬೇಕು ಎನ್ನುವುದು ಅವರ ಕನಸಾಗಿತ್ತು.
ಇದೀಗ ರಾಕೇಶ್ ತಂಗಿ ಮದುವೆ ಜವಾಬ್ಧಾರಿಯನ್ನು ಕಾಮಿಡಿ ಕಿಲಾಡಿಗಳು ಟೀಂ ತೆಗೆದುಕೊಂಡಿದೆ. ಇದನ್ನು ಶೋ ನಡೆಸಿಕೊಡುತ್ತಿದ್ದ ನಿರೂಪಕ ಮಾಸ್ಟರ್ ಆನಂದ್ ಬಹಿರಂಗಪಡಿಸಿದ್ದಾರೆ. ಕೈಲಾಸವೇ ತಂದಿಟ್ಟರೂ ರಾಕೇಶ್ ಸಹೋದರಿಯ ದುಃಖ ಭರಿಸಲು ನಮಗೆ ಸಾಧ್ಯವಿಲ್ಲ. ಆದರೆ ಅವಳ ಮದುವೆ ಮಾಡಬೇಕು ಎನ್ನುವುದು ರಾಕೇಶ್ ಕನಸಾಗಿತ್ತು. ಹೀಗಾಗಿ ಅದನ್ನು ಕಾಮಿಡಿ ಕಿಲಾಡಿಗಳು ಟೀಂ ಮಾಡಲಿದೆ. ಅವಳ ಮದುವೆ ಜವಾಬ್ಧಾರಿ ನಮ್ಮದು ಎಂದಿದೆ.