ಕುಂದಾಪುರ: ಚೈತ್ರಾ ಕುಂದಾಪುರ ಓರ್ವ ಕಳ್ಳಿ, ಅವಳನ್ನು ಮದುವೆಯಾದ ಅವನೂ ಕಳ್ಳನೇ ಎಂದು ತಂದೆ ಬಾಲಕೃಷ್ಣ ನಾಯಕ್ ದೊಡ್ಡ ಆರೋಪ ಮಾಡಿದ್ದಾರೆ.
ಮೊನ್ನೆಯಷ್ಟೇ ಬಿಗ್ ಬಾಸ್ ಖ್ಯಾತಿಯ ಹಿಂದೂ ನಾಯಕಿ ಚೈತ್ರಾ ಕುಂದಾಪುರ ತನ್ನ ಗೆಳೆಯ ಶ್ರೀಕಾಂತ್ ಕಶ್ಯಪ್ ಎಂಬವರೊಂದಿಗೆ ಮದುವೆಯಾಗಿದ್ದರು. ಈ ಮದುವೆಗೆ ಬಿಗ್ ಬಾಸ್ ಸ್ನೇಹಿತರೆಲ್ಲರೂ ಬಂದಿದ್ದರು. ಇದೀಗ ಮದುವೆ ಬಗ್ಗೆ ಅವರ ತಂದೆಯೇ ಅಪಸ್ವರವೆತ್ತಿದ್ದಾರೆ.
ಶ್ರೀಕಾಂತ್ ಕಶ್ಯಪ್ ಜೊತೆ ಮದುವೆಗೆ ಮಗಳು ಚೈತ್ರಾ ನನ್ನನ್ನು ಕರೆಯಲೇ ಇಲ್ಲ. ರೇಪ್ ಕೇಸ್ ಹಾಕ್ತೀನಿ ಎಂದು ಬೆದರಿಕೆ ಹಾಕಿ 5 ಕೋಟಿ ರೂ.ಗೆ ಬೇಡಿಕೆಯಿಟ್ಟವಳು ಚೈತ್ರಾ. ನನ್ನನ್ನು ತಂದೆ ಎಂದು ಅವಳು ಎಲ್ಲೂ ಹೇಳಿಕೊಳ್ಳಲ್ಲ. ಒಂದು ದಿನ ನನಗೆ ಊಟ ಕೊಟ್ಟವಳಲ್ಲ. ನಾನು ಕಟ್ಟಿದ ಮನೆಯಿಂದ ನನ್ನನ್ನೇ ಹೊರಗೆ ಹಾಕಿದಳು.
ಅವನೂ (ಶ್ರೀಕಾಂತ್ ಕಶ್ಯಪ್) ತನ್ನದೇ ಮನೆ ಎಂಬಂತೆ ಮನೆಗೆ ಬಂದು ಹೋಗುತ್ತಿದ್ದ. 12 ವರ್ಷದಿಂದ ಇತ್ತು ಅವರ ಸಂಬಂಧ. ನನ್ನ ಮಗಳ ಮದುವೆಯನ್ನು ನಾನು ಒಪ್ಪಲ್ಲ. ನನ್ನ ಪತ್ನಿಯೂ ಹಣದ ಆಸೆಗೆ ಇದನ್ನೆಲ್ಲಾ ಮಾಡ್ತಿದ್ದಾಳೆ. ಬಿಗ್ ಬಾಸ್ ಗೆ ಹೋಗುವಾಗಲೂ ನನಗೆ ಹೇಳಿರಲಿಲ್ಲ. ಮನೆಗೆ ಬೀಗ ಹಾಕಿ ಹೋಗಿದ್ದರು. ನನ್ನ ಮನೆಯಲ್ಲಿ ನಾನೇ ಅನಾಥ. ನನಗೆ ನನ್ನ ದೊಡ್ಡ ಮಗಳು ಮಾತ್ರ ಈಗ ಆಸರೆ ಎಂದು ಹೇಳಿಕೊಂಡಿದ್ದಾರೆ. ಚೈತ್ರಾ ನಾನೇ ಮನೆ ನಡೆಸುವವಳು ಎಂಬಂತೆ ಬಿಂಬಿಸಿಕೊಂಡಿದ್ದಾಳೆ. ಗೋವಿಂದ ಪೂಜಾರಿ 5 ಕೋಟಿ ರೂ. ಆಮಿಷ ಪ್ರಕರಣದಲ್ಲಿ ಪಡೆದ ಹಣವನ್ನು ಬೇರೆ ಬೇರೆ ಪಡ್ಡೆ ಹುಡುಗರ ಹೆಸರಿನಲ್ಲಿ ಡೆಪಾಸಿಟ್ ಸಾಲ ಪಡೆದಿದ್ದಾಳೆ. ಅವಳು ನನ್ನ ಮಗಳು ಎಂದು ಹೇಳಿಕೊಳ್ಳಲೂ ನನಗೆ ನಾಚಿಕೆಯಾಗ್ತಿದೆ ಎಂದಿದ್ದಾರೆ.