ಬೆಂಗಳೂರು: ಇಂದು ವಿಶ್ವ ತಾಯಂದಿರ ದಿನ. ಈ ವಿಶೇಷ ದಿನಕ್ಕೆ ಸ್ಯಾಂಡಲ್ ವುಡ್, ಕ್ರೀಡಾ ತಾರೆಯರು ತಮ್ಮ ಅಮ್ಮಂದಿರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.
ನಟ ಧ್ರುವ ಸರ್ಜಾ, ಅನಿರುದ್ಧ್ ಜತ್ಕಾರ್, ನಟಿ ತಾರಾ ಅನುರಾಧ ಸೇರಿದಂತೆ ತಾರೆಯರು ಅಮ್ಮನ ಜೊತೆಗಿರುವ ಫೋಟೋ ಪ್ರಕಟಿಸಿ ಶುಭ ಕೋರಿದ್ದಾರೆ.
ಇನ್ನು, ಕ್ರಿಕೆಟಿಗ ಯುವರಾಜ್ ಸಿಂಗ್ ಅಮ್ಮನ ಜೊತೆಗೆ ಇತ್ತೀಚೆಗೆ ಅಮ್ಮನಾಗಿರುವ ತಮ್ಮ ಪತ್ನಿ ಹೇಝಲ್ ಕೀತ್ ಗೂ ಶುಭ ಕೋರಿದ್ದಾರೆ.