Select Your Language

Notifications

webdunia
webdunia
webdunia
webdunia

ಐಪಿಎಲ್ 2022: ಸಿಎಸ್ ಕೆಗೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ

ಐಪಿಎಲ್ 2022: ಸಿಎಸ್ ಕೆಗೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಎದುರಾಳಿ
ಮುಂಬೈ , ಭಾನುವಾರ, 8 ಮೇ 2022 (08:50 IST)
ಮುಂಬೈ: ಐಪಿಎಲ್ 2022 ರ ಇಂದಿನ ಎರಡನೇ ಪಂದ್ಯದಲ್ಲಿ ಗುರು-ಶಿಷ್ಯರ ಸಮಾಗಮ. ಗುರು ಧೋನಿ ನೇತೃತ್ವದ ಸಿಎಸ್ ಕೆ ಶಿಷ್ಯ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ಧೋನಿ ನಾಯಕರಾಗಿ ವಾಪಸ್ ಆದ ಮೇಲೆ ಹೊಸ ಹುರುಪಿನಲ್ಲಿದೆ. ಧೋನಿ ನಾಯಕತ್ವದಲ್ಲಿ ಒಂದು ಗೆಲುವು, ಒಂದು ಸೋಲು ಕಂಡಿದೆ. ಇಂದು ಮತ್ತೆ ಧೋನಿ ಮ್ಯಾಜಿಕ್ ಮಾಡುತ್ತಾರೆ ಎಂಬ ವಿಶ್ವಾಸ ಅಭಿಮಾನಿಗಳದ್ದು.

ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಪಂದ್ಯದಲ್ಲಿ ಗೆದ್ದಿದ್ದು 10 ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಕಂಡಿದೆ. ಇದೀಗ ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿರುವ ಡೆಲ್ಲಿಗೆ ಇಂದಿನ ಪಂದ್ಯ ಉತ್ತಮ ವೇದಿಕೆಯಾಗಲಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಆರ್ ಸಿಬಿ