ಹೈದರಾಬಾದ್: ಕೆಜಿಎಫ್ 2 ಭರ್ಜರಿ ಯಶಸ್ಸಿನ ಬಳಿಕ ಹೊಂಬಾಳೆ ಫಿಲಂಸ್ ಪಾರ್ಟ್ 3 ಗೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
ಇದೀಗ ಕೆಜಿಎಫ್ 2 ನಲ್ಲಿ ಮುಖ್ಯ ವಿಲನ್ ಅಧೀರ ಪಾತ್ರಧಾರಿ ಹತನಾಗುತ್ತಾನೆ. ಹಾಗಿದ್ದರೆ ಈಗ ಕೆಜಿಎಫ್ 3 ನೇ ಭಾಗದಲ್ಲಿ ವಿಲನ್ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.
ಮೂಲಗಳ ಪ್ರಕಾರ ಕೆಜಿಎಫ್ 3 ನಲ್ಲಿ ಟಾಲಿವುಡ್ ನಟ ರಾಣಾ ದಗ್ಗುಬಟ್ಟಿ ವಿಲನ್ ರೋಲ್ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಗೆ ಎದುರಾಗಿ ರಾಣಾ ವಿಲನ್ ಪಾತ್ರ ಮಾಡುತ್ತಿದ್ದಾರೆ. ಹೀಗಾಗಿ ಕೆಜಿಎಫ್ 3 ನಲ್ಲೂ ಅವರೇ ಮುಖ್ಯ ವಿಲನ್ ಆಗುವ ಸಾಧ‍್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ.