Publish Date: Wed, 05 May 2021 (07:04 IST)
Updated Date: Wed, 05 May 2021 (07:06 IST)
ಹೈದರಾಬಾದ್ : ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ಬಳಿಕ ವಿವಾದತ್ಮಕ ಟ್ವೀಟ್ ಮಾಡಿ ಹಿಂಸಾಚಾರಕ್ಕೆ ಕಾರಣವಾದ ಹಿನ್ನಲೆಯಲ್ಲಿ ನಟಿ ಕಂಗನಾ ರನೌತ್ ಅವರ ಟ್ವೀಟರ್ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗಿದೆ.
ಪಶ್ವಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ನಟಿ ಕಂಗನಾ ಸಕ್ರಿಯವಾಗಿ ಚರ್ಚಿಸುತ್ತಿದ್ದಾರೆ, ಮತ್ತು ಗಲಭೆಗಳಿಗೆ ಕರೆ ನೀಡಿದ್ದಾರೆ. ಭಾರತದ ಪ್ರಧಾನಿ ಮೋದಿಯವರು ಗೂಂಡಾಗಳ ಮೇಲೆ ದಾಳಿ ಮಾಡುವಲ್ಲಿ ತಮ್ಮ ಶಕ್ತಿಯನ್ನು ತೋರಿಸಬೇಕೆಂದು ವಿನಂತಿಸಿದ್ದಾರೆ. ಹೀಗಾಗಿ ಅವರ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಲಾಗಿದೆ.
ಆದಕಾರಣ ನಟಿ ಕಂಗನಾ ಟ್ವೀಟರ್ ನಲ್ಲಿ ಸುಮಾರು ಮೂರು ಮಿಲಿಯನ್ ಫಾಲೋವರ್ಸ್ಗಳನ್ನು ಕಳೆದುಕೊಂಡಿದ್ದಾರೆ. ಆದರೆ ಅವರ ಇನ್ ಸ್ಟಾಗ್ರಾಂ ಖಾತೆ ಕಾರ್ಯನಿರತವಾಗಿದೆ.