Publish Date: Wed, 01 May 2019 (08:10 IST)
Updated Date: Wed, 01 May 2019 (08:11 IST)
ಬೆಂಗಳೂರು: ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ನಟಿ ರಮ್ಯಾಗೆ ವಿಡಿಯೋ ಮೂಲಕ ತಿರುಗೇಟು ಕೊಡ್ತೀನಿ ಎಂದಿದ್ದ ಬುಲೆಟ್ ಪ್ರಕಾಶ್ ಇದೀಗ ವಿಡಿಯೋ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಫೇಸ್ ಬುಕ್ ನಲ್ಲಿ ವಿಡಿಯೋ ಪ್ರಕಟಿಸಿರುವ ಬುಲೆಟ್ ಪ್ರಕಾಶ್ ‘ವಿಶ್ವವೇ ಮೆಚ್ಚಿರುವ ನಾಯಕ ಪ್ರಧಾನಿ ಮೋದಿ. ಅವರ ಬಗ್ಗೆ ಅಪ್ರಬುದ್ಧ, ಇಲ್ಲಸಲ್ಲದ ಹೇಳಿಕೆ ನೀಡುವ ಮೊದಲು ರಮ್ಯಾ ಪ್ರಬುದ್ಧತೆ ಬೆಳೆಸಿಕೊಳ್ಳಲಿ.
ತಮಗೆ ಬುದ್ಧಿ ಇಲ್ಲದೇ ಇದ್ದರೆ ತಮ್ಮದೇ ಪಕ್ಷದಲ್ಲಿ ಹಲವು ರಾಜಕೀಯ ತಜ್ಞರಿರಬಹುದು. ಅವರಿಂದ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಟ್ಯೂಷನ್ ಪಡೆದುಕೊಳ್ಳಿ. ಹಾಗಾದರೂ ಸಾರ್ವಜನಿಕವಾಗಿ ಒಬ್ಬ ನಾಯಕನ ಬಗ್ಗೆ ರಾಷ್ಟ್ರೀಯ ಪಕ್ಷದ ನಾಯಕಿಯಾಗಿ ಹೇಗೆ ಮಾತನಾಡಬೇಕು ಎಂದು ತಿಳಿದುಕೊಳ್ಳಬಹುದು. ಪಾಕಿಸ್ತಾನವನ್ನು ಸ್ವರ್ಗ ಎಂದು ಕೊಂಡಾಡುವ ರಮ್ಯಾ ಮೇಡಂನಂತಹವರಿಂದ ವಿಶ್ವನಾಯಕ ಮೋದಿ ಬಗ್ಗೆ ಹೇಳಿಸಿಕೊಳ್ಳಬೇಕಾ?’ ಎಂದು ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ