Publish Date: Tue, 30 Apr 2019 (08:01 IST)
Updated Date: Tue, 30 Apr 2019 (08:03 IST)
ಬೆಂಗಳೂರು: ಪ್ರಧಾನಿ ಮೋದಿಯನ್ನು ಹಿಟ್ಲರ್ ಗೆ ಹೋಲಿಸಿ ಟೀಕೆಗೊಳಗಾಗಿದ್ದ ಕಾಂಗ್ರೆಸ್ ನಾಯಕಿ, ನಟಿ ರಮ್ಯಾಗೆ ಬಿಜೆಪಿ ನಾಯಕ, ನಟ ಬುಲೆಟ್ ಪ್ರಕಾಶ್ ತಿರುಗೇಟು ನೀಡಿದ್ದಾರೆ.
ಟ್ವಿಟರ್ ನಲ್ಲಿ ಬಾಲಕನ ಕಿವಿ ಹಿಂಡುವ ಹಿಟ್ಲರ್ ಮತ್ತು ಮೋದಿ ಫೋಟೋ ಹಾಕಿದ್ದ ರಮ್ಯಾ ಪ್ರಧಾನಿಯವರನ್ನು ಸರ್ವಾಧಿಕಾರಿ ಹಿಟ್ಲರ್ ಗೆ ಹೋಲಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಬುಲೆಟ್ ಪ್ರಕಾಶ್, ಈ ಬಾಲಕನ ವಯಸ್ಸಿನಲ್ಲಿ ರಮ್ಯಾ ಮೇಡಂಗೆ ಅವರ ತಂದೆಯವರು ಕಿವಿ ಹಿಂಡಿ ಬುದ್ಧಿ ಕಲಿಸಿದ್ದರೆ ಅವರು ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಹೀಗೆಲ್ಲಾ ಕ್ಷುಲ್ಲುಕ ಮಾತನಾಡುತ್ತಿರಲಿಲ್ಲ. ಅದೇನೇ ಇದ್ದರೂ ರಮ್ಯಾಗೆ ವಿಡಿಯೋ ಮೂಲಕ ನಾಳೆ ಉತ್ತರಿಸುವೆ ಎಂದು ಬುಲೆಟ್ ಪ್ರಕಾಶ್ ಟ್ವೀಟ್ ಮಾಡಿದ್ದಾರೆ. ಅವರು ಬಿಡುಗಡೆ ಮಾಡಲಿರುವ ವಿಡಿಯೋ ಯಾವುದು ಎಂದು ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
Krishnaveni K
Publish Date: Tue, 30 Apr 2019 (08:01 IST)
Updated Date: Tue, 30 Apr 2019 (08:03 IST)