Select Your Language

Notifications

webdunia
webdunia
webdunia
webdunia

ಮತ್ತೆ ಧಾರವಾಹಿಗೆ ಬಂದ ಬ್ರೋ ಗೌಡ

Bro Gowda

Krishnaveni K

ಬೆಂಗಳೂರು , ಶುಕ್ರವಾರ, 11 ಜುಲೈ 2025 (12:26 IST)
ಬೆಂಗಳೂರು: ಲಕ್ಷ್ಮೀ ಬಾರಮ್ಮಾ ಧಾರವಾಹಿ ಮೂಲಕ ಮನೆ ಮಗನಂತಾಗಿದ್ದ ನಟ ಶಮಂತ್ ಅಲಿಯಾಸ್ ಬ್ರೋ ಗೌಡ ಇದೀಗ ಮತ್ತತೆ ಕಿರುತೆರೆಗೆ ಬಂದಿದ್ದಾರೆ.

ಲಕ್ಷ್ಮೀ ಬಾರಮ್ಮಾ ಧಾರವಾಹಿ ಮುಗಿದು ಕೆಲವು ದಿನಗಳೇ ಆಗಿವೆ. ಆದರೂ ಜನ ಈಗಲೂ ಆ ಧಾರವಾಹಿಯನ್ನು ಮತ್ತು ವೈಷ್ಣವ್ ಪಾತ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಿಜ ಜೀವನದಲ್ಲೂ ಸಿಂಗರ್ ಆಗಿರುವ ಬ್ರೋ ಗೌಡ ಈ ಧಾರವಾಹಿಯಲ್ಲೂ ಸಿಂಗರ್ ಆಗಿಯೇ ಕಾಣಿಸಿಕೊಂಡಿದ್ದರು.

ಎಲ್ಲರಿಗೂ ಗೊತ್ತಿರುವ ಹಾಗೆ ಭಾಗ್ಯ ಲಕ್ಷ್ಮಿ ಧಾರವಾಹಿಯೇ ಎರಡು ಕವಲೊಡೆದು ಲಕ್ಷ್ಮೀ ಬಾರಮ್ಮಾ ಧಾರವಾಹಿಯಾಗಿತ್ತು. ಇದೀಗ ಭಾಗ್ಯಲಕ್ಷ್ಮಿ ಧಾರವಾಹಿಗೆ ಬ್ರೋ ಗೌಡ ಕಮ್ ಬ್ಯಾಕ್ ಮಾಡಿದ್ದಾರೆ. ಅದೂ ಅತಿಥಿಯಾಗಿ.

ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಈಗ ಭಾಗ್ಯ ತಂಗಿ ಪೂಜಾ ಮದುವೆ ಸೀನ್ ನಡೆಯುತ್ತಿದೆ. ಇಲ್ಲಿ ತಾಂಡವ್ ಮದುವೆ ತಡೆಯಲು ಎಂಟ್ರಿ ಕೊಡುತ್ತಾನೆ. ಆತನನ್ನು ತಡೆಯಲು ವೈಷ್ಣವ್ ಎಂಟ್ರಿ ಕೊಡುತ್ತಾನೆ. ಈ ಮೂಲಕ ಹಲವು ದಿನಗಳ ನಂತರ ಮತ್ತೆ ವೈಷ್ಣವ್ ನನ್ನು ತೆರೆ ಮೇಲೆ ನೋಡಿ ಜನರೂ ಖುಷಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ರಾಜೇಶ್ ನಟರಂಗ ಗಾಜನೂರಿನ ಅಣ್ಣಾವ್ರ ಮನೆಗೆ ಹೋಗಿದ್ದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ