Select Your Language

Notifications

webdunia
webdunia
webdunia
webdunia

ಮದುವೆಗೂ ಮುನ್ನಾ ಜಾಲಿ ಟ್ರಿಪ್‌ ಹೊರಟ ಬಾಲಿವುಡ್‌ ಲವ್‌ ಬರ್ಡ್ಸ್‌ ಅದಿತಿ- ಸಿದ್ಧಾರ್ಥ್‌

Aditi

sampriya

ಮುಂಬೈ , ಭಾನುವಾರ, 2 ಜೂನ್ 2024 (11:29 IST)
Photo By Instagram
ಮುಂಬೈ:  ಈಚೆಗೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಬಾಲಿವುಡ್‌ನ ಲವ್‌ ಬರ್ಡ್ಸ್‌ ನಟಿ ಅದಿತಿ ರಾವ್ ಹೈದರಿ ಮತ್ತು ನಟ ಸಿದ್ಧಾರ್ಥ್‌ ಅವರು ಟಸ್ಕಾಣಿಯಲ್ಲಿ ಎಂಜಾಯ್‌ ಮಾಡುತ್ತಿರುವ ರೋಮ್ಯಾಂಟಿಕ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

'ಹೀರಾಮಂಡಿ' ನಟಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಗೆಳೆಯನ ಜತೆಗಿನ ಲವ್ವಿ-ಡವ್ವಿ ಚಿತ್ರಗಳ ಸರಣಿಯನ್ನು ಪೋಸ್ಟ್ ಮಾಡಿದ್ದಾರೆ.
ಇನ್ನೂ ಈಚೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಶೀಘ್ರದಲ್ಲೇ ಮದುವೆಯಾಗುವುದಾಗಿ ಹೇಳಿದ್ದಾರೆ. ಇದೀಗ ಮದುವೆಗೂ ಮುನ್ನಾ ತಮ್ಮ ಬ್ಯುಸಿ ಸ್ಕೆಡ್ಯೂಲ್‌ನಿಂದ ಬ್ರೇಕ್‌ ಪಡೆದು ಒಟ್ಟಿಗೆ ಸಮಯವನ್ನು ಆನಂದಿಸಲು ಪ್ರಯಾಣ ಬೆಳೆಸಿದ್ದಾರೆ.


ನಿಶ್ಚಿತಾರ್ಥಕ್ಕೂ ಮುನ್ನವೇ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋದ ಕೆಳಗೆ "ಕೃತಜ್ಞರಾಗಿರಬೇಕು ಮತ್ತು #underthetuscansun" ಎಂದು ಶೀರ್ಷಿಕೆ ನೀಡಿದ್ದಾರೆ.

ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಸ್ವಲ್ಪ ಸಮಯದಿಂದ ಡೇಟಿಂಗ್ ಮಾಡುತ್ತಿದ್ದರು ಮತ್ತು ದಂಪತಿಗಳು ಈ ವರ್ಷದ ಆರಂಭದಲ್ಲಿ ಉಂಗುರವನ್ನು ಹಾಕಿದರು. ಮಾರ್ಚ್ 28 ರಂದು, ಅದಿತಿ ಸಿದ್ಧಾರ್ಥ್ ಅವರೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸೂರ್ಯ ಮುಂದಿನ ಸಿನಿಮಾದಲ್ಲಿ ಚಾನ್ಸ್‌ ಗಿಟ್ಟಿಸಿಕೊಂಡ ಪೂಜಾ ಹೆಗ್ಡೆ