Select Your Language

Notifications

webdunia
webdunia
webdunia
webdunia

ಅನುಷ್ಕಾ ಶರ್ಮಾ ತೂಕದ ಬಗ್ಗೆ ಕಮೆಂಟ್‌ ಮಾಡಿದ್ದಕ್ಕೆ ಗರಂ ಆದ ಅಭಿಮಾನಿಗಳು

Anuska

sampriya

ಮುಂಬೈ , ಶನಿವಾರ, 1 ಜೂನ್ 2024 (17:06 IST)
Photo By X
ಮುಂಬೈ: ನಾಳೆ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಆರಂಭಗೊಳ್ಳುವ ಟಿ 20 ವಲ್ಡ್‌ ಕಪ್‌ನಲ್ಲಿ ಪತಿ ವಿರಾಟ್‌ಗೆ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಸಾಥ್‌ ನೀಡಲಿದ್ದಾರೆ. 

ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ಮುಂಬರುವ ಟಿ 20 ವಿಶ್ವಕಪ್‌ಗೆ ಲವ್ ಬರ್ಡ್ಸ್ ಇದೀಗ ಒಟ್ಟಾಗಿ ಪ್ರಯಾಣ ಬೆಳೆಸಿದ್ದಾರೆ.  ಶುಕ್ರವಾರ ಸಂಜೆ ಪತಿ ವಿರಾಟ್ ಕೊಹ್ಲಿ ಅವರೊಂದಿಗೆ ಅನುಷ್ಕಾ ಶರ್ಮಾ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ್ಡರು. ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗಿನ ಜೋಡಿಯ ಚಿತ್ರವು ಅಂತರ್ಜಾಲದಲ್ಲಿ ಹರಿದಾಡುತ್ತಿದೆ, ಅದರಲ್ಲಿ ಅನುಷ್ಕಾ ಮತ್ತು ವಿರಾಟ್ ಅವರೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬರುತ್ತದೆ.

ಚಿತ್ರದಲ್ಲಿ, ಅನುಷ್ಕಾ ನೀಲಿ ಡೆನಿಮ್ ಜೊತೆ ಕಪ್ಪು ಟೀ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದರೆ, ವಿರಾಟ್ ಕಪ್ಪು ಪ್ಯಾಂಟ್ ಜೊತೆಗೆ ದುಂಡಗಿನ ಕುತ್ತಿಗೆಯ ಬಿಳಿ ಟೀ ಶರ್ಟ್ ಮೇಲೆ ಬೀಜ್ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೂಡಲೇ, ಕೆಲವು ನೆಟಿಜನ್‌ಗಳು ಅನುಷ್ಕಾ ಅವರ ನೋಟದ ಕುರಿತು ವಿಧ ವಿಧವಾಗಿ ಕಮೆಂಟ್ ಮಾಡುತ್ತಿದ್ದಾರೆ.

ಎರಡನೇ ಮಗುವಿಗೆ ಜನ್ಮ ನೀಡಿದ ನಂತರ ಆಕೆಯ ನೋಟದ ಬಗ್ಗೆ ಕಮೆಂಟ್‌ ಮಾಡಿ, ಟ್ರೋಲ್‌ ಮಾಡಿದ್ದಾರೆ.  ಇದಕ್ಕೆ ಅವರ ಅಭಿಮಾನಿಗಳು ''ಅನುಷ್ಕಾಳನ್ನು ಟ್ರೋಲ್ ಮಾಡುವ ಜನರು ಅವಳು ಹಾಲುಣಿಸುವ ತಾಯಿ ಎಂದು ತಿಳಿದಿರಬೇಕು ಎಂದು ಗರಂ ಆಗಿದ್ದಾರೆ.

ಮಗುವಾದ ಬಳಿಕ ತೂಕ ಹೆಚ್ಚಾಗುವುದು ಸಾಮಾನ್ಯ, ಮತು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆಕೆಯ ನೋಟವನ್ನು ಕೇಂದ್ರೀಕರಿಸುವ ಬದಲು, ಈ ಚಿತ್ರದಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡೋಣ,'' ಎಂದು ಮತ್ತೊಬ್ಬರು ಬರೆದಿದ್ದಾರೆ.

ಹೆಚ್ಚಿನ ಬಳಕೆದಾರರು  ದಂಪತಿಗಳ ಸರಳತೆ ಮತ್ತು ಉತ್ತಮ ನೋಟಕ್ಕಾಗಿ ಪ್ರಶಂಸಿಸಿದ್ದಾರೆ. ಬಳಕೆದಾರರೊಬ್ಬರು, ''ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸುಂದರವಾಗಿ ಕಾಣುತ್ತಿದ್ದಾರೆ'' ಎಂದು ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ್‌ ಜತೆಗಿನ ಬ್ರೇಕಪ್‌ ಸುದ್ದಿಗೆ ಬ್ರೇಕ್‌ ನೀಡಿದ ಮಲೈಕಾ ಅರೋರಾ ಮ್ಯಾನೇಜರ್