Select Your Language

Notifications

webdunia
webdunia
webdunia
webdunia

ರಾಜಕೀಯಕ್ಕೆ ಬಾಲಿವುಡ್ ನಟ ಸೋನು ಸೂದ್ ಎಂಟ್ರಿ?

ರಾಜಕೀಯಕ್ಕೆ ಬಾಲಿವುಡ್ ನಟ ಸೋನು ಸೂದ್ ಎಂಟ್ರಿ?
ಮುಂಬೈ , ಬುಧವಾರ, 2 ಸೆಪ್ಟಂಬರ್ 2020 (19:51 IST)
ಲಾಕ್ ಡೌನ್ ಸಮಯದಲ್ಲಿ ಹಲವರಿಗೆ ಆರ್ಥಿಕವಾಗಿ ಬೆಂಬಲ ನೀಡಿದ್ದ ಬಾಲಿವುಡ್ ನಟ ಸೋನು ಸೂದ್ ರಾಜಕೀಯ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದೆ.

ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಸೋನು ಸೂದ್, ಈ ಸಮಯದಲ್ಲಿ ರಾಜಕೀಯ ಪ್ರವೇಶಿಸಲು ತಾವು ಆಸಕ್ತಿ ಹೊಂದಿಲ್ಲ, ನಟನಾಗಿ ದೂರ ಸಾಗಬೇಕಿದೆ ಎಂದಿದ್ದಾರೆ. 

ಕಳೆದ 10 ವರ್ಷಗಳಿಂದ ನಾನು ರಾಜಕೀಯಕ್ಕೆ ಸೇರಲು ಆಫರ್‌ಗಳನ್ನು ಪಡೆಯುತ್ತಿದ್ದೇನೆ. 'ನೀವು ಮಹಾನ್ ನಾಯಕರಾಗುತ್ತೀರಿ' ಎಂದು ಅನೇಕ ಜನರು ಹೇಳಿದ್ದರು. ಆದರೆ ನಾನು ನಟನಾಗಲು ನಾನು ಬಯಸುತ್ತೇನೆ. ಸಿನಿಮಾ ಹಾಗೂ ರಾಜಕೀಯ ಎರಡೂ ದೋಣಿಗಳಲ್ಲಿ ತಾವು ಪ್ರಯಾಣ ಮಾಡೋದಿಲ್ಲ ಎಂದಿದ್ದಾರೆ.

ನಾನು ರಾಜಕೀಯಕ್ಕೆ ಬಂದರೆ,  ಶೇಕಡಾ 100 ಪರಿಶ್ರಮ ಜನರ ಅಭಿವೃದ್ದಿಗೆ ನೀಡುತ್ತೇನೆ. ಯಾರಿಗೂ ಯಾವುದೇ ಸಮಸ್ಯೆ ಇರಲ್ಲ ಎಂದು ಖಚಿತಪಡಿಸಿಕೊಳ್ಳುತ್ತೇನೆ. ಅವರ ಸಮಸ್ಯೆಗಳನ್ನು ಪರಿಹರಿಸುತ್ತೇನೆ, ಸಮಯ ಕಳೆಯುತ್ತೇನೆ ಎಂದಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟರಾದ ರಣವೀರ್ ಸಿಂಗ್, ರಣಬೀರ್ ಕಪೂರ್ ಗೆ ಡ್ರಗ್ಸ್ ಪರೀಕ್ಷೆ?