ಬಾಲಿವುಡ್ ನಲ್ಲಿ ಇದೀಗ ಡ್ರಗ್ ಮಾಫಿಯಾ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ.
ನಟಿ ಕಂಗನಾ ರಣಾವತ್ ಒಂದಾದ ಮೇಲೊಂದರಂತೆ ಬಾಲಿವುಡ್, ನಿರ್ದೇಶಕರು, ನಟರ ಮೇಲೆ ಗೂಗ್ಲಿ ಎಸೆಯತೊಡಗಿದ್ದಾರೆ.
ಬಾಲಿವುಡ್ ನಟರಾದ ರಣವೀರ್ ಸಿಂಗ್, ರಣಬೀರ್ ಕಪೂರ್, ಅಯಾನ್ ಮುಖರ್ಜಿ ಹಾಗೂ ವಿಕ್ಕಿ ಕೌಶಿಕ್ ಡ್ರಗ್ ಪರೀಕ್ಷೆಗಾಗಿ ತಮ್ಮ ರಕ್ತದ ಮಾದರಿ ನೀಡಬೇಕೆಂದು ಬಾಲಿವುಡ್ ನಟಿ ಟ್ವಿಟ್ ಮಾಡಿದ್ದಾರೆ.
ಈ ನಟರು ಬಹಳಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾರೆ. ಅಲ್ಲದೇ, ಇವರು ಕೊಕೇನ್ ಸೇವಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಆರೋಪ ಮುಕ್ತರಾಗಲು ರಕ್ತದ ಮಾದರಿ ಪರೀಕ್ಷೆಗೆ ನೀಡಬೇಕೆಂದು ನಟಿ ಕಂಗನಾ ರಣಾವತ್ ಟ್ವಿಟ್ ಮಾಡಿದ್ದಾರೆ.