Publish Date: Wed, 02 Sep 2020 (12:22 IST)
Updated Date: Wed, 02 Sep 2020 (12:24 IST)
ಬಾಲಿವುಡ್ ನಟಿಯೊಬ್ಬಳು ಟ್ರೋಲ್ ಗೆ ಒಳಗಾದ ಬಳಿಕ ಎಚ್ಚೆತ್ತುಕೊಂಡಿದ್ದಾರೆ.
ನಟ ಸುಶಾಂತ್ ಸಿಂಗ ರಜಪೂತ್ ಕೇಸ್ ನಲ್ಲಿ ಸಿಬಿಐ ತನಿಖೆ ನಡೆಸಿ ಒಂದು ತೀರ್ಮಾನಕ್ಕೆ ಬರಲಿ. ಆ ಬಳಿಕ ರಿಯಾ ವಿರುದ್ಧ ಆರೋಪಮಾಡಬೇಕು. ಈಗಲೇ ಮಾಡಬಾರದು ಅಂತೆಲ್ಲ ಸಂದರ್ಶನವೊಂದರಲ್ಲಿ ಹೇಳಿದ್ದ ನಟಿ ಹಿನಾ ಖಾನ್ ಟ್ರೋಲ್ ಗೆ ಒಳಗಾಗಿದ್ದರು.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಪೋಸ್ಟ್ ಮಾಡಿರುವ ಹಿನಾ ಖಾನ್, ತಾನು ಯಾವಾಗಲೂ ಸತ್ಯಕ್ಕಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
"ನಾನು ಯಾವಾಗಲೂ ಸತ್ಯದ ಪರವಾಗಿ ನಿಲ್ಲುತ್ತೇನೆ ಮತ್ತು ನನ್ನ ಅಭಿಮಾನಿಗಳು ಒಟ್ಟಾಗಿ ಸತ್ಯಕ್ಕಾಗಿ ನನ್ನೊಂದಿಗೆ ನಿಲ್ಲಬೇಕೆಂದು ನಾನು ಬಯಸುತ್ತೇನೆ! ನಾವು ಒಬ್ಬರನ್ನೊಬ್ಬರು ನಂಬಿದರೆ ನಾವು ಈ ರಾಕ್ಷಸರಿಗೆ ಅಥವಾ ಟ್ರೋಲ್ ಗೆ ಎಂದಿಗೂ ಭಯಪಡುವುದಿಲ್ಲ. ನನ್ನ ದೃಷ್ಟಿಕೋನವನ್ನು ನಾನು ಹೊಂದಿದ್ದೇನೆ ಮತ್ತು ಯಾವಾಗಲೂ ಹೊಂದಿರುತ್ತೇನೆ. ಸತ್ಯವು ನಮಗೆ ಆ ಶಕ್ತಿಯನ್ನು ನೀಡುತ್ತದೆ! ಜೈ ಹಿಂದ್ " ಎಂದು ಬರೆದುಕೊಂಡಿದ್ದಾರೆ.