Select Your Language

Notifications

webdunia
webdunia
webdunia
webdunia

ಎಲ್‌ಕೆಜಿ ಮಕ್ಕಳಂತೆ ಕಿತ್ತಾಡುತ್ತಿರುವ ಬಿಜೆಪಿ- ಡಿಎಂಕೆ: ಸೂಪರ್‌ ಸ್ಟಾರ್‌ ವಿಜಯ್‌ ದಳಪತಿ ಲೇವಡಿ ಮಾಡಿದ್ಯಾಕೆ

Kollywood Superstar Vijay Dalapathy

Sampriya

ಚೆನ್ನೈ , ಬುಧವಾರ, 26 ಫೆಬ್ರವರಿ 2025 (20:17 IST)
Photo Courtesy X
ಚೆನ್ನೈ: ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರದ  ಆಡಳಿತರೂಢ ಬಿಜೆಪಿ ಮತ್ತು ತಮಿಳುನಾಡು ಆಡಳಿತರೂಢ ಡಿಎಂಕೆ ಪಕ್ಷವನ್ನು ಕಾಲಿವುಡ್‌ ಸೂಪರ್ ಸ್ಟಾರ್ ವಿಜಯ್‌ ದಳಪತಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ತಮಿಳಿಗ ವೆಟ್ರಿ ಕಳಗಂ ಪಕ್ಷದ ಮೊದಲ ವಾರ್ಷಿಕೋತ್ಸವ ಸಂಭ್ರಮಾಚರಣೆ ವೇಳೆ ಮಾಮಲ್ಲಪುರಂನಲ್ಲಿ ಮಾತನಾಡಿದ ಪಕ್ಷದ ಸಂಸ್ಥಾಪಕನೂ ಆಗಿರುವ ವಿಜಯ್‌, ಭಾಷೆ ಎಂಬ ಗಂಭೀರ ವಿಷಯವನ್ನು ಕ್ಷುಲ್ಲಕಗೊಳಿಸಿರುವ ಬಿಜೆಪಿ ಮತ್ತು ಆಡಳಿತಾರೂಢ ಡಿಎಂಕೆ ಪಕ್ಷಗಳು ಸಾಮಾಜಿಕ ಮಾಧ್ಯಮದಲ್ಲಿ ಪುಟ್ಟ ಮಕ್ಕಳಂತೆ ಕಿತ್ತಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿಯು ಡಿಎಂಕೆ ಪಕ್ಷದ ಗೆಟ್‌ಔಟ್‌ ಮೋದಿ ಅಭಿಯಾನಕ್ಕೆ ಗೆಟ್‌ಔಟ್‌ ಸ್ಟಾಲಿನ್‌ ಎನ್ನುವ ಅಭಿಯಾನ ಮಾಡಿತು. ಈ ಹ್ಯಾಷ್‌ಟ್ಯಾಗ್‌ ಜಗಳ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳ ಕಿತ್ತಾಟದಂತಾಗಿದೆ ಎಂದು ಹೇಳಿದ ಅವರು ಅಭಿವೃದ್ಧಿ ಕುರಿತು ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ.

ತಮಿಳಿಗ ವೆಟ್ರಿ ಕಳಗಂ ಪಕ್ಷ ಎಲ್ಲಾ ಭಾಷೆಗಳನ್ನು ಗೌರವಿಸುತ್ತದೆ. ಆದರೆ, ಬೇರೆ ಭಾಷೆಗೋಸ್ಕರ ಸ್ವಂತ ಗೌರವವನ್ನು ಬಿಟ್ಟುಕೊಡುವುದಿಲ್ಲ. ವೈಯಕ್ತಿಕವಾಗಿ ಯಾವ ಭಾಷೆಯನ್ನಾದರೂ ಕಲಿಯಬಹುದು. ಆದರೆ ರಾಜ್ಯ ಭಾಷೆಯನ್ನು ಬಿಟ್ಟು ಬೇರೆ ಭಾಷೆಯನ್ನು ಮುಂದಿಟ್ಟುಕೊಂಡು ಅದನ್ನು ರಾಜಕೀಯವಾಗಿ ಹೇರುವುದು ಸರಿಯಲ್ಲಿ ಎಂದು ಕಿಡಿಕಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

12 ದಿನಗಳಲ್ಲಿ ₹ 500 ಕೋಟಿ ಕ್ಲಬ್‌ ಸೇರಿದ ಛಾವಾ: ಟಾಲಿವುಡ್‌ಗೆ ಎಂಟ್ರಿಯಾಗಲು ಸಜ್ಜಾದ ರಶ್ಮಿಕಾ ಸಿನಿಮಾ