Select Your Language

Notifications

webdunia
webdunia
webdunia
webdunia

ಮಹಾಕುಂಭಮೇಳದಲ್ಲಿ ಶೂಟಿಂಗ್ ಮಾಡಿದ ಸೀತಾರಾಮ ಧಾರವಾಹಿ: ನೆಟ್ಟಿಗರು ಕಾಮೆಂಟ್ ನೋಡಿ

Vaishnavi Gowda

Krishnaveni K

ಬೆಂಗಳೂರು , ಮಂಗಳವಾರ, 25 ಫೆಬ್ರವರಿ 2025 (11:07 IST)
Photo Credit: Instagram
ಬೆಂಗಳೂರು: ಕಿರುತೆರೆ ಧಾರವಾಹಿಗಳು ಇತ್ತೀಚೆಗಿನ ದಿನಗಳಲ್ಲಿ ಯಾವುದೇ ಸಿನಿಮಾಗೂ ಕಮ್ಮಿಯಿಲ್ಲದಂತೆ ಸಾಹಸ ಮಾಡುತ್ತಿವೆ. ಇದೀಗ ಸೀತಾರಾಮ ಧಾರವಾಹಿ ತಂಡ ಮಹಾಕುಂಭಮೇಳದಲ್ಲಿ ಶೂಟಿಂಗ್ ಮಾಡಿ ಬಂದಿದ್ದು ಇದರ ಬಗ್ಗೆ ನೆಟ್ಟಿಗರು ಹೇಳಿದ್ದೇನು ಇಲ್ಲಿದೆ ವಿವರ.

ವೈಷ್ಣವಿ ಗೌಡ ಸೀತಾ ಆಗಿ ಮತ್ತು ಗಗನ್ ಚಿನ್ನಪ್ಪ ಶ್ರೀರಾಮ್ ದೇಸಾಯಿ ಪಾತ್ರದಲ್ಲಿ ನಟಿಸಿರುವ ಸೀತಾರಾಮ ಧಾರವಾಹಿಯಲ್ಲಿ ಈಗ ನಾಯಕಿ ಮಗಳು ಸಿಹಿ ಸಾವಿನ ನಂತರ ಆಕೆಯದ್ದೇ ತದ್ರೂಪು ಸುಬ್ಬಿ ಎಂಟ್ರಿಯಾಗಿದೆ.

ಈಗ ಸಿಹಿ ಸ್ಥಾನದಲ್ಲಿ ಸುಬ್ಬಿ ದೇಸಾಯಿ ಮನೆಗೆ ಎಂಟ್ರಿ ಕೊಟ್ಟಿದ್ದು ಸೀತಾ ಮೊದಲಿನಂತೆ ಲವ ಲವಿಕೆಯಿಂದಿದ್ದಾರೆ. ಕತೆ ಹೀಗೆ ಸಾಗಿರುವಾಗ ಈಗ ಧಾರವಾಹಿ ತಂಡ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಶೂಟಿಂಗ್ ನಡೆಸಿ ಬಂದಿದೆ.

ಯಾವುದೇ ಧಾರವಾಹಿ ಮಾಡದ ಸಾಹಸವನ್ನು ಸೀತಾರಾಮ ಧಾರವಾಹಿ ಮಾಡಿ ಬಂದಿದೆ. ಇದರ ಪ್ರೋಮೋಗಳು ಈಗಾಗಲೇ ಹರಿಯಬಿಡಲಾಗಿದ್ದು ಇದನ್ನು ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಟಿಆರ್ ಪಿಗಾಗಿ ನೀವು ಮಹಾ ಕುಂಭಮೇಳವನ್ನು ಬಿಡಲಿಲ್ಲ ಎಂದು ಕೆಲವರು ಕಾಲೆಳೆದಿದ್ದರೆ ಮತ್ತೆ ಕೆಲವರು ಈ ಎಪಿಸೋಡ್ ಗಳನ್ನು ನೋಡಲು ಕಾಯುತ್ತಿರುವುದಾಗಿ ಹೇಳಿದ್ದಾರೆ. ಮತ್ತೆ ಕೆಲವರು ನೆರಳಿನಂತೆ ಸುಬ್ಬಿ, ಸೀತಾ-ರಾಮರನ್ನು ಹಿಂಬಾಲಿಸುತ್ತಿರುವ ಸಿಹಿ ಆತ್ಮಕ್ಕೆ ಮುಕ್ತಿ ಕೊಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವಾರ ಕುಂಭಮೇಳದ ಎಪಿಸೋಡ್ ಗಳು ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮತ್ತೆ ದರ್ಶನ್ ತೂಗುದೀಪ ಮೀಟ್ಸ್ ಪವಿತ್ರಾ ಗೌಡ