Select Your Language

Notifications

webdunia
webdunia
webdunia
Thursday, 10 April 2025
webdunia

ಅಮ್ಮ ಪೊಲೀಸ್ ವ್ಯಾನ್ ಹತ್ತುವಾಗ ಬಿಕ್ಕಿ ಬಿಕ್ಕಿ ಅತ್ತ ಪವಿತ್ರಾ ಮಗಳು

Pavitra Gowda Daughter

Sampriya

ಬೆಂಗಳೂರು , ಗುರುವಾರ, 20 ಜೂನ್ 2024 (19:32 IST)
Photo Courtesy X
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣದ ಎ 1 ಆರೋಪಿ ಪವಿತ್ರಾ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇನ್ನೂ ಕೊಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಇಂದು ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ಈ ವೇಳೆ ಅಮ್ಮನನ್ನು ನೋಡಲು ಪವಿತ್ರಾ ಗೌಡ ಮಗಳು ಕೋರ್ಟ್‌ಗೆ ಬಂದಿದ್ದರು. ಇತ್ತ ನ್ಯಾಯಧೀಶರು ಪವಿತ್ರಾ ಗೌಡ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಪರಪ್ಪನ ಅಗ್ರಹಾರ ಸೇರಲಾಯಿತು. ಈ ವೇಳೆ ಅಮ್ಮ ಜೈಲು ಪಾಲಾಗುತ್ತಿರುವುದನ್ನು ನೋಡಿದ ಪವಿತ್ರಾ ಗೌಡ ಮಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.

ಇತ್ತ ಪವಿತ್ರಾ ಜೈಲಿಗೆ ಹೋಗಲು ವ್ಯಾನ್ ಹತ್ತುವಾಗ ಇತ್ತ ಕಾಯುತ್ತಾ ನಿಂತ ಪವಿತ್ರಾ ಗೌಡ ತಾಯಿ ಹಾಗೂ ಮಗಳು ಕಣ್ಣೀರು ಹಾಕಿದ್ದಾರೆ. ಇನ್ನು ಪವಿತ್ರಾ ಗೌಡ ಕೂಡ ಇಬ್ಬರನ್ನು ನೋಡಿ ಗದ್ಗದಿತರಾದರು. ಬಳಿಕ ಅಮ್ಮ ಹಾಗೂ ಮಗಳನ್ನು ಸಮಾಧಾನ ಪಡಿಸಿದ್ದಾರೆ.

ಕಣ್ಣೀರು ಹಾಕುತ್ತಾ ಇದ್ದ ಮಗಳಿಗೆ, ಏನೂ ಆಗಲ್ಲ. ಸುಮ್ಮನೇ ಇರು ಸುಮ್ಮನೆ ಇರು ಎಂದು ಪವಿತ್ರಾ ಗೌಡ ಅಲ್ಲಿಂದಲೇ  ಸಮಾಧಾನ ಮಾಡಿದ್ದಾರೆ.ಅಮ್ಮ ಪೊಲೀಸ್ ವ್ಯಾನ್ ಹತ್ತುವಾಗ ಬಿಕ್ಕಿ ಬಿಕ್ಕಿ ಅತ್ತ ಪವಿತ್ರಾ ಮಗಳು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣದ ಎ 1 ಆರೋಪಿ ಪವಿತ್ರಾ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇನ್ನೂ ಕೊಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಇಂದು ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.

ಈ ವೇಳೆ ಅಮ್ಮನನ್ನು ನೋಡಲು ಪವಿತ್ರಾ ಗೌಡ ಮಗಳು ಕೋರ್ಟ್‌ಗೆ ಬಂದಿದ್ದರು. ಇತ್ತ ನ್ಯಾಯಧೀಶರು ಪವಿತ್ರಾ ಗೌಡ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಪರಪ್ಪನ ಅಗ್ರಹಾರ ಸೇರಲಾಯಿತು. ಈ ವೇಳೆ ಅಮ್ಮ ಜೈಲು ಪಾಲಾಗುತ್ತಿರುವುದನ್ನು ನೋಡಿದ ಪವಿತ್ರಾ ಗೌಡ ಮಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.

ಇತ್ತ ಪವಿತ್ರಾ ಜೈಲಿಗೆ ಹೋಗಲು ವ್ಯಾನ್ ಹತ್ತುವಾಗ ಇತ್ತ ಕಾಯುತ್ತಾ ನಿಂತ ಪವಿತ್ರಾ ಗೌಡ ತಾಯಿ ಹಾಗೂ ಮಗಳು ಕಣ್ಣೀರು ಹಾಕಿದ್ದಾರೆ. ಇನ್ನು ಪವಿತ್ರಾ ಗೌಡ ಕೂಡ ಇಬ್ಬರನ್ನು ನೋಡಿ ಗದ್ಗದಿತರಾದರು. ಬಳಿಕ ಅಮ್ಮ ಹಾಗೂ ಮಗಳನ್ನು ಸಮಾಧಾನ ಪಡಿಸಿದ್ದಾರೆ.

ಕಣ್ಣೀರು ಹಾಕುತ್ತಾ ಇದ್ದ ಮಗಳಿಗೆ, ಏನೂ ಆಗಲ್ಲ. ಸುಮ್ಮನೇ ಇರು ಸುಮ್ಮನೆ ಇರು ಎಂದು ಪವಿತ್ರಾ ಗೌಡ ಅಲ್ಲಿಂದಲೇ  ಸಮಾಧಾನ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವಿತ್ರಾ ಗೌಡಗಿತ್ತಾ ಹೀಗೊಂದು ಚಾಳಿ