Publish Date: Tue, 08 Oct 2019 (09:23 IST)
Updated Date: Tue, 08 Oct 2019 (09:25 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈಗಾಗಲೇ ಬಿಗ್ ಬಾಸ್ ಮನೆಗೆ ಹೋಗಲಿರುವ ಸಂಭಾವ್ಯರ ಹೆಸರುಗಳು ಓಡಾಡುತ್ತಿದ್ದು, ಅವುಗಳು ಹೀಗಿವೆ ನೋಡಿ.
ಬಿಗ್ ಬಾಸ್ ಗೆ ಈ ಬಾರಿ ಹೋಗಲಿರುವ ಸ್ಪರ್ಧಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳಲ್ಲಿ ಪುಟ್ಟ ಗೌರಿ ಮದುವೆ ಖ್ಯಾತಿಯ ರಂಜಿನಿ ರಾಘವನ್, ರಾಧಾ ರಮಣ ಧಾರವಾಹಿ ಖ್ಯಾತಿಯ ಶ್ವೇತಾ ಆರ್ ಪ್ರಸಾದ್, ನಟಿ ಅಮೂಲ್ಯ ಸೇರಿದ್ದಾರೆ.
ಪುರುಷ ಸ್ಪರ್ಧಿಗಳ ಪೈಕಿ ಮಜಾ ಟಾಕೀಸ್ ನಲ್ಲಿ ಮಿಂಚಿದ್ದ ಕುರಿ ಪ್ರತಾಪ್, ಜೀ ಕನ್ನಡ ವಾಹಿನಿಯ ಶೋ ಮೂಲಕ ತೆರೆಗೆ ಪರಿಚಯವಾಗಿದ್ದ ಶಿವರಾಜ್ ಕೆ ಆರ್ ಪೇಟೆ, ಆರ್ ಜೆ ಅಗ್ನಿ ಹೆಸರುಗಳು ಚಾಲ್ತಿಯಲ್ಲಿವೆ. ಈ ವಾರಾಂತ್ಯಕ್ಕೆ ಬಿಗ್ ಬಾಸ್ ಗೆ ಚಾಲನೆ ಸಿಗುತ್ತಿದೆ. ಅಲ್ಲಿಯವರೆಗೆ ಅಂತಿಮ ಪಟ್ಟಿ ಸಸ್ಪೆನ್ಸ್ ಆಗಿಯೇ ಇರಲಿದೆ.