Publish Date: Mon, 30 Sep 2019 (09:01 IST)
Updated Date: Mon, 30 Sep 2019 (09:08 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ರಾಧಾ ರಮಣ ಇನ್ನು ಕೆಲವೇ ಕಂತುಗಳು ಮಾತ್ರ ಪ್ರಸಾರವಾಗಲಿದೆ.
ರಾಧಾ ರಮಣ ಧಾರವಾಹಿ ಕೊನೆಯ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಇದು ಮುಕ್ತಾಯವಾಗುತ್ತಿದೆ. ಅಕ್ಟೋಬರ್ ನಲ್ಲಿ ಬಿಗ್ ಬಾಸ್ ಆರಂಭವಾಗುತ್ತಿದ್ದು, ಈ ರಿಯಾಲಿಟಿ ಶೋಗೆ ಸಮಯ ಹೊಂದಿಸಿಕೊಳ್ಳಲು ರಾಧಾ ರಮಣ ಮುಕ್ತಾಯವಾಗುತ್ತಿದೆ. ಇತ್ತೀಚೆಗೆ ರಾಧಾ ಪಾತ್ರಧಾರಿ ಶ್ವೇತಾ ಬದಲಾದ ನಂತರ ಧಾರವಾಹಿ ಟಿಆರ್ ಪಿ ಕಡಿಮೆಯಾಗಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಇದನ್ನು ಕೊನೆಗೊಳಿಸಲಾಗುತ್ತಿದೆ.
ಆದರೆ ಧಾರವಾಹಿ ಮುಗಿಯುತ್ತಿರುವ ಸುದ್ದಿ ಕೇಳಿ ವೀಕ್ಷಕರು ಶಾಕ್ ಆಗುತ್ತಿದೆ. ಅಗ್ನಿಸಾಕ್ಷಿ, ಲಕ್ಷ್ಮೀ ಬಾರಮ್ಮ ಮುಂತಾದ ಧಾರವಾಹಿಗಳು ಆರು ವರ್ಷಗಳಿಂದಲೂ ಹೆಚ್ಚು ಸಮಯದಿಂದ ಪ್ರಸಾರವಾಗುತ್ತಿದ್ದು, ಅದನ್ನು ನಿಲ್ಲಿಸುವ ಬದಲು ರಾಧಾ ರಮಣವನ್ನು ಯಾಕೆ ಮುಕ್ತಾಯಗೊಳಿಸುತ್ತಿದ್ದೀರಿ ಎಂದು ಕೆಲವು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಅದೇನೇ ಇರಲಿ, ಒಂದು ಹ್ಯಾಪೀ ಎಂಡಿಂಗ್ ನೊಂದಿಗೆ ಧಾರವಾಹಿ ಮುಕ್ತಾಯಗೊಳ್ಳುತ್ತಿರುವುದು ಪಕ್ಕಾ ಆಗಿದೆ.