Select Your Language

Notifications

webdunia
webdunia
webdunia
webdunia

‘ಜೋಡಿಹಕ್ಕಿ’ ಜಾನಕಿಯ ಬೋಲ್ಡ್ ಫೋಟೋ ಶೂಟ್

‘ಜೋಡಿಹಕ್ಕಿ’ ಜಾನಕಿಯ ಬೋಲ್ಡ್ ಫೋಟೋ ಶೂಟ್
ಬೆಂಗಳೂರು , ಸೋಮವಾರ, 23 ಸೆಪ್ಟಂಬರ್ 2019 (09:04 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಡಿಹಕ್ಕಿ ಧಾರವಾಹಿಯಲ್ಲಿ ಜಾನಕಿ ಟೀಚರ್ ಪಾತ್ರ ಮಾಡುತ್ತಿದ್ದ ನಟಿ ಚೈತ್ರಾ ರಾವ್ ಬೋಲ್ಡ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಜೋಡಿಹಕ್ಕಿ ಧಾರವಾಹಿ ಬಳಿಕ ಕೆಲವು ದಿನಗಳ ಬ್ರೇಕ್ ಪಡೆದುಕೊಂಡಿರುವ ನಟಿ ಚೈತ್ರಾ ಹೊಸದಾಗಿ ಫೋಟೋ ಶೂಟ್ ಮಾಡಿದ್ದು, ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಫೋಟೋ ನೋಡಿ ಇವರೇನಾ ಜಾನಕಿ ಟೀಚರ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಮೂಲಕ ಗ್ಲಾಮರಸ್ ಲುಕ್ ಗೂ ಸೈ ಎಂದು ಸಂದೇಶ ಕೊಟ್ಟಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೋಂ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಮಾಯಾಬಜಾರ್ 2016 ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿರುವ ಚೈತ್ರಾ ಆ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯೋತ್ಸವಕ್ಕೆ ಬರಲಿದೆ ಶಿವರಾಜ್ ಕುಮಾರ್ ‘ಆಯುಷ್ಮಾನ್ ಭವ’