Publish Date: Sun, 07 Jan 2018 (06:36 IST)
Updated Date: Sun, 07 Jan 2018 (06:38 IST)
ಬೆಂಗಳೂರು: ಕಳೆದ ವಾರ ರಿಯಾಜ್ ನಿವೇದಿತಾ ಗೌಡಗೆ ಕಳಪೆ ಬೋರ್ಡ್ ಕೊಟ್ಟಿದ್ದರೆ ಈ ವಾರದ ನಾಯಕ ಸಮೀರ್ ಆಚಾರ್ಯರಿಂದ ಬೆಸ್ಟ್ ಪರ್ಫಾರ್ಮರ್ ಎನಿಸಿಕೊಂಡರು.
ಇಡ್ಲಿ ತಿನ್ನುವ ಟಾಸ್ಕ್, ನಾಣ್ಯ ಹುಡುಕುವ ಟಾಸ್ಕ್ ಹಾಗೂ ಬಾಟಲಿ ಎತ್ತುವ ಟಾಸ್ಕ್ ನಲ್ಲಿ ಕೆಲಸ ಮಾಡಿದ್ದ ನಿವೇದಿತಾ ಗೌಡಗೆ ಸಮೀರ್ ಈ ವಾರ ಅತ್ಯುತ್ತಮ ನಿರ್ವಹಣೆ ತೋರಿದ ಸ್ಪರ್ಧಿ ಎನ್ನುವ ಬಿರುದು ಕೊಟ್ಟರು.
ದುರ್ಬಲ ಸ್ಪರ್ಧಿ ಎನ್ನುತ್ತಲೇ ಮನೆ ಪ್ರವೇಶಿಸಿದ ನಿವೇದಿತಾ ಮೂರನೇ ಬಾರಿಗೆ ಉತ್ತಮ ನಿರ್ವಹಣೆ ತೋರಿದ್ದಾರೆ ಎಂದು ಬೋರ್ಡ್ ಪಡೆದಿರುವುದು ನಿಜಕ್ಕೂ ಗಮನಾರ್ಹ. ಇದೇ ಕಾರಣಕ್ಕೆ ಅವರು ಅಭಿಮಾನಿಗಳಿಗೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಹಾಗೂ ಮನೆಯಲ್ಲಿ ಇನ್ನೂ ಉಳಿದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ