Publish Date: Mon, 23 Nov 2020 (10:24 IST)
Updated Date: Mon, 23 Nov 2020 (10:26 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರತಂಡ ಕೆಲವೇ ಕ್ಷಣಗಳಲ್ಲಿ ಹೊಸ ಸುದ್ದಿಯೊಂದನ್ನು ಅಭಿಮಾನಿಗಳಿಗೆ ನೀಡಲಿದೆ.
ಇಂದು 11 ಗಂಟೆಗೆ ಯುವರತ್ನ ಸಿನಿಮಾ ಬಗ್ಗೆ ಬಿಗ್ ಅನೌನ್ಸ್ ಮೆಂಟ್ ಮಾಡಲಿರುವುದಾಗಿ ಚಿತ್ರತಂಡ ಘೋಷಿಸಿದೆ. ಹೀಗಾಗಿ ಇದು ಸಿನಿಮಾ ಹಾಡಿನ ಬಗ್ಗೆ ಅಥವಾ ಟ್ರೈಲರ್ ಬಿಡುಗಡೆ ಬಗ್ಗೆ ಇರಬಹುದಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಇನ್ನು ಕೆಲವರು ಚಿತ್ರದ ರಿಲೀಸ್ ಡೇಟ್ ಏನಾದ್ರೂ ಘೋಷಿಸಬಹುದಾ ಎಂಬ ನಿರೀಕ್ಷೆಯಲ್ಲಿದೆ.