Select Your Language

Notifications

webdunia
webdunia
webdunia
webdunia

ಅಭಿಮಾನಿಯ ಟೀ ಸ್ಟಾಲ್ ಗೆ ಬಂದು ಸರ್ಪೈಸ್ ಕೊಟ್ಟ ಶಿವರಾಜ್ ಕುಮಾರ್

ಅಭಿಮಾನಿಯ ಟೀ ಸ್ಟಾಲ್ ಗೆ ಬಂದು ಸರ್ಪೈಸ್ ಕೊಟ್ಟ ಶಿವರಾಜ್ ಕುಮಾರ್
ಮೈಸೂರು , ಸೋಮವಾರ, 23 ನವೆಂಬರ್ 2020 (09:25 IST)
ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೈಸೂರಿನಲ್ಲಿರುವ ತಮ್ಮ ಅಪ್ಪಟ ಅಭಿಮಾನಿಯ ಟೀ ಸ್ಟಾಲ್ ಗೆ ಭೇಟಿ ಕೊಟ್ಟು ಖುಷಿಪಡಿಸಿದ್ದಾರೆ.


ಮೈಸೂರಿನ ‘ಡಾ. ರಾಜ್ ಟೀ ಸ್ಟಾಲ್’ ಗೆ ಸಂಗಡಿಗರೊಂದಿಗೆ ಭೇಟಿ ಕೊಟ್ಟ ಶಿವಣ್ಣ ತೀರಾ ಸಾಮಾನ್ಯರಂತೆ ಹೊರಗೆ ಕಲ್ಲು ಬೆಂಚಿನ ಮೇಲೆ ಕುಳಿತು ಚಹಾ ಸವಿದಿದ್ದಲ್ಲದೆ, ಅಲ್ಲಿ ನೆರೆದಿದ್ದ ಅಭಿಮಾನಿಗಳೊಂದಿಗೆ ಸೆಲ್ಫೀಗೆ ಪೋಸ್ ಕೊಟ್ಟು ಖುಷಿಕೊಟ್ಟಿದ್ದಾರೆ. ಇದ್ದಕ್ಕಿದ್ದಂತೆ ಶಿವಣ್ಣರನ್ನು ಕಂಡ ಅಭಿಮಾನಿಗಳು ಅವರ ಸರಳತೆಗೆ ಮಾರು ಹೋಗಿದ್ದು, ಪುಷ್ಪ ಗುಚ್ಛ ನೀಡಿ ತಮ್ಮ ಕೈಲಾದ ರೀತಿಯಲ್ಲಿ ಸನ್ಮಾನ ಮಾಡಿ ಬೀಳ್ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಧಿಕಾ ಪಂಡಿತ್ ಬಾಲ್ಯದ ಫೋಟೋ ನೋಡಿದ್ರೆ ಫ್ಯಾನ್ಸ್ ಗೆ ಈ ಪುಟಾಣಿಯದ್ದೇ ನೆನಪಾಗುತ್ತಂತೆ!