Publish Date: Sat, 07 Sep 2019 (11:02 IST)
Updated Date: Sat, 07 Sep 2019 (11:04 IST)
ಬೆಂಗಳೂರು: ಸ್ಯಾಂಡಲ್ ವುಡ್ ತಾರೆಯರು ಇತ್ತೀಚೆಗೆ ತಮ್ಮ ಸಿನಿಮಾ ಪ್ರಚಾರಕ್ಕೆ ಪ್ರೊ ಕಬಡ್ಡಿ ಲೀಗ್ ನ್ನು ವೇದಿಕೆ ಮಾಡಿಕೊಂಡಂತಿದೆ.
ಮೊನ್ನೆಯಷ್ಟೇ ನಟಿ ಹರಿಪ್ರಿಯಾ ತಮ್ಮ ಕನ್ನಡ್ ಗೊತ್ತಿಲ್ಲ ತಂಡದ ಜತೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಮೈದಾನದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಪಾಲ್ಗೊಂಡು ಬೆಂಗಳೂರು ಬುಲ್ಸ್ ಗೆ ಚಿಯರ್ ಮಾಡುವುದರ ಜತೆಗೆ ತಮ್ಮ ಸಿನಿಮಾ ಪ್ರಚಾರದ ಕೆಲಸವನ್ನೂ ಮಾಡಿಕೊಂಡಿದ್ದರು.
ಇದೀಗ ರೋರಿಂಗ್ ಸ್ಟಾರ್ ಶ್ರೀ ಮುರಳಿ ಸರದಿ. ಶ್ರೀಮುರಳಿ ಭರಾಟೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದ ಪ್ರಚಾರಕ್ಕಾಗಿ ನಿನ್ನೆ ನಡೆದ ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಪಂದ್ಯಕ್ಕೆ ಹಾಜರಾಗಿದ್ದರು. ಈ ಪಂದ್ಯವನ್ನು ಬೆಂಗಳೂರು ಗೆದ್ದುಕೊಂಡಿತ್ತು. ತವರಿನ ತಂಡಕ್ಕೆ ಚಿಯರ್ ಮಾಡುವುದರ ಜತೆಗೆ ಶ್ರೀಮುರಳಿ ಮತ್ತು ಟೀಂ ತಮ್ಮ ಚಿತ್ರದ ಪ್ರಮೋಷನ್ ಕೆಲಸವನ್ನೂ ಮಾಡಿದ್ದಾರೆ.