Publish Date: Wed, 04 Sep 2019 (08:55 IST)
Updated Date: Wed, 04 Sep 2019 (08:58 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಭರಾಟೆ ಸಿನಿಮಾದ ಯೋ ಯೋ ಎನ್ನುವ ಪವರ್ ಫುಲ್ ಹಾಡು ನಾಳೆ ಬಿಡುಗಡೆಯಾಗುತ್ತಿದೆ.
ಇದಕ್ಕೂ ಮೊದಲು ಭರ ಭರ ಭರಾಟೆ ಎನ್ನುವ ಜಬರ್ದಸ್ತ್ ಹಾಡನ್ನು ಚಿತ್ರತಂಡ ವಿದೇಶದಲ್ಲಿ ಲಾಂಚ್ ಮಾಡಿ ಸುದ್ದಿ ಮಾಡಿತ್ತು. ಇದೀಗ ಮತ್ತೊಂದು ಹಾಡು ಬಿಡುಗಡೆಯಾಗುತ್ತಿದೆ.
ಚೇತನ್ ಕುಮಾರ್ ಬರೆದಿರುವ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಾರೆ. ಈ ಸಿನಿಮಾದ ಅಡಿಯೋದಿಂದ ಬಂದ ಹಣವನ್ನು ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೀಡುವುದಾಗಿ ಈ ಮೊದಲೇ ಚಿತ್ರತಂಡ ಘೋಷಿಸಿಕೊಂಡಿತ್ತು.