Select Your Language

Notifications

webdunia
webdunia
webdunia
Thursday, 10 April 2025
webdunia

ಭೈರತಿ ರಣಗಲ್ ರಿಲೀಸ್: ಅಭಿಮಾನಿಗಳೊಂದಿಗೆ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿದ ಡಾಲಿ ಧನಂಜಯ ವಿಡಿಯೋ

Bhaiarathi Ranagal release

Krishnaveni K

ಬೆಂಗಳೂರು , ಶುಕ್ರವಾರ, 15 ನವೆಂಬರ್ 2024 (12:33 IST)
ಬೆಂಗಳೂರು: ಶಿವರಾಜ್ ಕುಮಾರ್ ನಾಯಕರಾಗಿರುವ ಭೈರತಿ ರಣಗಲ್ ಸಿನಿಮಾ ಇಂದು ರಿಲೀಸ್ ಆಗಿದ್ದು, ನಟ ಡಾಲಿ ಧನಂಜಯ ಅಭಿಮಾನಿಗಳೊಂದಿಗೆ ಥಿಯೇಟರ್ ಮುಂದೆ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿದ್ದಾರೆ.

ಇಂದು ಬೆಳಿಗ್ಗೆಯೇ ಥಿಯೇಟರ್ ಮುಂದೆ ಅಭಿಮಾನಿಗಳು ಸಾಲುಗಟ್ಟಿ ನಿಂತು ಭೈರತಿ ರಣಗಲ್ ವೀಕ್ಷಣೆ ಮಾಡಿದ್ದಾರೆ. ಹಲವು ದಿನಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟನ ಸಿನಿಮಾವೊಂದು ಬಿಡುಗಡೆಯಾಗಿದೆ. ಹೀಗಾಗಿ ಅಭಿಮಾನಿಗಳ ರೆಸ್ಪಾನ್ಸ್ ಕೂಡಾ ಜೋರಾಯಿಯೇ ಇದೆ.

ಇಂದು ಭೈರತಿ ರಣಗಲ್ ನಲ್ಲಿ ಶಿವಣ್ಣ ಧರಿಸಿರುವಂತೆ ಕಪ್ಪು ಬಣ್ಣದ ಶರ್ಟ್, ಪಂಚೆ ತೊಟ್ಟುಕೊಂಡು ಸಂಗಡಿಗರೊಂದಿಗೆ ಥಿಯೇಟರ್ ಗೆ ಬಂದ ನಟ ಡಾಲಿ ಧನಂಜಯ ಅಭಿಮಾನಿಗಳೊಂದಿಗೆ ಕೂತು ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಬಳಿಕ ಥಿಯೇಟರ್ ಮುಂದೆ ಹೆಜ್ಜೆ ಹಾಕುತ್ತಿದ್ದ ಅಭಿಮಾನಿಗಳೊಂದಿಗೆ ತಾವೂ ಮೈಮರೆತು ಡ್ಯಾನ್ಸ್ ಮಾಡಿದ್ದಾರೆ.

ಭೈರತಿ ರಣಗಲ್ ನರ್ತನ್ ನಿರ್ದೇಶನದ ಪಕ್ಕಾ ಮಾಸ್ ಸಿನಿಮಾವಾಗಿದ್ದು ಮೊದಲಾರ್ಧ ವೀಕ್ಷಿಸಿದಾಗ ಜನ ಸಿನಿಮಾ ಅದ್ಬುತ ಎಂದು ಕೊಂಡಾಡಿದ್ದಾರೆ. ಇಡೀ ಸಿನಿಮಾದಲ್ಲಿ ಶಿವಣ್ಣ ಖಡಕ್ ಲುಕ್, ಅಭಿನಯಕ್ಕೆ ಜನ ಮನಸೋತಿದ್ದಾರೆ. ಮುಫ್ತಿ ಬಳಿಕ ಶಿವಣ್ಣ-ನರ್ತನ್ ಕಾಂಬಿನೇಷನ್ ನ ಮಾಸ್ಟರ್ ಪೀಸ್ ಇದಾಗಿದೆ ಎಂದು ಪ್ರೇಕ್ಷಕರು ಕೊಂಡಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಬಲ್ ಪೇಮೆಂಟ್ ಕೇಳಲು ಸೀತಾರಾಮ ಸಿಹಿಗೆ ಬಂತು ಡಿಮ್ಯಾಂಡ್