Publish Date: Thu, 07 Nov 2024 (11:58 IST)
Updated Date: Thu, 07 Nov 2024 (12:06 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಗೆ ಅನಾರೋಗ್ಯ ಕಾಡುತ್ತಿದೆ ಎಂದು ಕೆಲವು ದಿನಗಳಿಂದ ಗುಸು ಗುಸು ಕೇಳಿಬಂದಿತ್ತು. ಅದನ್ನೀಗ ಸ್ವತಃ ಶಿವಣ್ಣ ಖಚಿತಪಡಿಸಿದ್ದಾರೆ.
ಭೈರತಿ ರಣಗಲ್ ಸಿನಿಮಾ ಬಿಡುಗಡೆಗೆ ಮುನ್ನ ಯೂ ಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಿವಣ್ಣ ತಮ್ಮ ಅನಾರೋಗ್ಯದ ವಿಚಾರವನ್ನು ದೃಢಪಡಿಸಿದ್ದಾರೆ. ಅದರಲ್ಲಿ ಏನಿದೆ? ಮುಚ್ಚಿಡೋದ್ರಲ್ಲಿ ಅರ್ಥವೇ ಇಲ್ಲ.ನನಗೆ ಪ್ರಾಬ್ಲಂ ಇರುವುದು ನಿಜ ಎಂದಿದ್ದಾರೆ.
ನನಗೆ ಹೆಲ್ತ್ ಪ್ರಾಬ್ಲಂ ಇದೆ. ಅದಕ್ಕೆ ಟ್ರೀಟ್ ಮೆಂಟ್ ಕೂಡಾ ಶುರುವಾಗಿದೆ. ಈಗಾಗಲೇ ಇದರ ನಡುವೆಯೇ 45 ಶೂಟಿಂಗ್ ಮುಗಿಸಿದ್ದೇನೆ. ಹಾಗಂತ ಇದನ್ನು ಮುಚ್ಚಿಡೋದರಲ್ಲಿ ಏನ್ ಅರ್ಥ ಇದೆ ಹೇಳಿ? ಯಾಕೆ ಮುಚ್ಚಿಡಬೇಕು ಎಂದು ಶಿವಣ್ಣ ಪ್ರಶ್ನೆ ಮಾಡಿದ್ದಾರೆ.
ಪ್ರಾಬ್ಲಂ ಇದೆ, ಟ್ರೀಟ್ ಮೆಂಟ್ ನಡೆಯುತ್ತಿದೆ. ಹಾಗಂತ ಕೆಲಸಕ್ಕೆ ಏನೂ ತೊಂದರೆಯಾಗಿಲ್ಲ. ಸದ್ಯದಲ್ಲೇ ಒಂದು ಆಪರೇಷನ್ ಮಾಡಿಸಬೇಕಿದೆ. ಅದನ್ನು ಬೆಂಗಳೂರಿನಲ್ಲೇ ಮಾಡುವುದಾ ಅಮೆರಿಕಾದಲ್ಲಿ ಮಾಡುವುದಾ ಎಂದು ತೀರ್ಮಾನವಾಗಿಲ್ಲ. ಆ ಒಂದು ಆಪರೇಷನ್ ಆದ್ರೆ ನಾರ್ಮಲ್ ಆಗ್ತೀನಿ. ಏನೂ ತೊಂದರೆಯಿಲ್ಲ. ನಿಮ್ಮ ಶಿವಣ್ಣ ಆಕ್ಟೀವ್ ಆಗಿಯೇ ಇರ್ತಾರೆ. ಭೈರತಿ ರಣಗಲ್ ರಿಲೀಸ್ ಮುಗಿಸ್ಕೊಂಡು ಸರ್ಜರಿ ಮಾಡಿಸಿಕೊಳ್ಳುತ್ತೇನೆ ಎಂದು ಶಿವಣ್ಣ ಹೇಳಿದ್ದಾರೆ.