ಬೆಂಗಳೂರು: ಸದ್ಯ ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಪೂಜಾ ಮದುವೆ ಅದ್ಧೂರಿಯಾಗಿ ನಡೆಯುತ್ತಿದೆ. ಭಾಗ್ಯ ತನ್ನ ತಂಗಿಯ ಮದುವೆಯನ್ನು ಹುಡುಗನ ಕಡೆಯವರ ಬೇಡಿಕೆಯಂತೆ ನೆರವೇರಿಸುತ್ತಿದ್ದಾಳೆ. ಆದರೆ ಒಂದಾದ್ಮೇಲೆ ಒಂದು ವಿಘ್ನಗಳು ಎದುರಾಗುತ್ತಲೇ ಇದೆ. ಇದೀಗ ಮಹಾತಿರುವಿನೊಂದಿಗೆ ಭಾಗ್ಯಲಕ್ಷ್ಮೀ ಸೀರಿಯಲ್ ಪ್ರಸಾರವಾಗುತ್ತಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೂಜಾ ಮದುವೆ ಸಂಬಂಧ ಕುಸುಮಾಳನ್ನು ಪ್ರಶ್ನೆ ಮಾಡಿದ್ದಾರೆ.
ಈ ಕುಸುಮ ನಂಗೆ ಎಲ್ಲ ಶಾಸ್ತ್ರ, ಸಂಪ್ರದಾಯ ಗೊತ್ತು ಅಂತ ಹೇಳ್ತಾಳೆ. ಆ ಆಷಾಢದಲ್ಲಿ ಮದುವೆ ಮಾಡ್ಬಾರ್ದು ಅಂತ ಗೊತ್ತಿಲ್ವಾ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಈ ಟ್ರೋಲ್‌ಗೆ ಬಗೆ ಬಗೆಯಾಗಿ ಕಮೆಂಟ್‌ಗಳು ಬರುತ್ತಿದೆ. ಮದುವೆ ಆಷಾಢದಲ್ಲಿ ಶುರು ಆದರೂ ತಾಳಿ ಕಟ್ಟೋದು ಮಾತ್ರ ಶ್ರಾವಣದಲ್ಲೇ, ಮತ್ತೊಬ್ಬರು ಮದ್ವೆ ನಿಂತು ಹೋಯಿತು ಸ್ವಾಮಿ, ಈ ಆಷಾಢ ಹೋಗಿ ಶ್ರಾವಣ ಬಂದ್ರೆ ನಮ್ಮ ಕಿಶನ್‌ಗೆ ಪೂಜಗೆ ತಾಳಿ ಕಟ್ತಾನೆ ಅಂತ ಸಿದ್ದಿ ಬುದ್ಧಿ ಜೋಯಿಸ್ರು ಹೇಳಿದ್ದಾರೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.