Publish Date: Sun, 29 May 2022 (11:20 IST)
Updated Date: Sun, 29 May 2022 (11:39 IST)
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾ.ಮಾ. ಹರೀಶ್ ಗೆಲುವು ಸಾಧಿಸಿದ್ದಾರೆ.
ಸಾ.ರಾ. ಗೋವಿಂದು ಮತ್ತು ಭಾ.ಮಾ. ಹರೀಶ್ ನಡುವೆ ಸ್ಪರ್ಧೆ ನಡೆದಿತ್ತು. ಭಾ.ಮಾ. ಹರೀಶ್ ಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಘಟಾನುಘಟಿಗಳ ಬೆಂಬಲವಿತ್ತು.
ಎರಡೂ ಬಣಗಳ ನಡುವೆ ತೀವ್ರ ಪೈಪೋಟಿಯಿತ್ತು. ಅಂತಿಮವಾಗಿ ಭಾ.ಮಾ. ಹರೀಶ್ ಹೆಚ್ಚು ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.