Publish Date: Sun, 29 May 2022 (08:30 IST)
Updated Date: Sun, 29 May 2022 (08:51 IST)
ಬೆಂಗಳೂರು: ಕೆಜಿಎಫ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ ನಾಯಕಿಯಾಗಿ ಅಭಿನಯಿಸಿ ಗಮನ ಸೆಳೆದಿರುವ ನಟಿ ಶ್ರೀನಿಧಿ ಶೆಟ್ಟಿ ಈಗ ಭಾರೀ ಸಂಭಾವನೆಗೆ ಡಿಮ್ಯಾಂಡ್ ಮಾಡುತ್ತಿದ್ದಾರಂತೆ.
ಕೆಜಿಎಫ್ ಯಶಸ್ಸು ಕಂಡರೂ ಶ್ರೀನಿಧಿ ಶೆಟ್ಟಿ ಹೊಸ ಸಿನಿಮಾ ಘೋಷಣೆಯಾಗಿಲ್ಲ. ಹೀಗಾಗಿ ನಟಿಗೆ ಅವಕಾಶಗಳೇ ಇಲ್ಲವೇ ಎಂದು ಅಚ್ಚರಿಪಡುವಂತಾಗಿತ್ತು.
ಆದರೆ ಅಸಲಿಗೆ ನಟಿಯನ್ನು ಈಗಾಗಲೇ ಅನೇಕ ತೆಲುಗು ನಿರ್ಮಾಪಕರು ಸಂಪರ್ಕಸಿದ್ದಾರಂತೆ. ಆದರೆ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಪಡೆಯುತ್ತಿರುವುದಕ್ಕಿಂತಲೂ ಹೆಚ್ಚು ಸಂಭಾವನೆಗೆ ಡಿಮ್ಯಾಂಡ್ ಮಾಡಿದ್ದಕ್ಕೆ ನಿರ್ಮಾಪಕರೇ ಬೆಚ್ಚಿಬಿದ್ದಿದ್ದಾರೆ ಎಂದು ಲೇಟೆಸ್ಟ್ ಆಗಿ ಹರಿದಾಡುತ್ತಿರುವ ರೂಮರ್.