Webdunia - Bharat's app for daily news and videos

Install App

ಬಿಗ್ ಬಾಸ್ ಕನ್ನಡ ಸೀಸನ್ 11: ಈ ಸ್ಪರ್ಧಿಗಳನ್ನು ನೋಡಿದ್ರೆ ಕಳೆದ ಸೀಸನ್ ನಲ್ಲಿದ್ದ ಇವರನ್ನು ನೆನಪಾಗುತ್ತಂತೆ

Krishnaveni K
ಬುಧವಾರ, 2 ಅಕ್ಟೋಬರ್ 2024 (10:10 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ಎರಡೇ ದಿನಕ್ಕೆ ಶೋ ರಂಗೇರುತ್ತಿದೆ. ಮೊದಲ ದಿನದಂದಲೇ ಕಚ್ಚಾಟ ಶುರುವಾಗಿದೆ. ಇದೀಗ ಶೋನಲ್ಲಿರುವ ಕೆಲವು ಸ್ಪರ್ಧಿಗಳನ್ನು ನೋಡಿ ವೀಕ್ಷಕರು ಕಳೆದ ಸೀಸನ್ ನಲ್ಲಿದ್ದ ಕೆಲವು ಸ್ಪರ್ಧಿಗಳನ್ನು ನೆನಪು ಮಾಡಿಕೊಂಡಿದ್ದಾರೆ.
 
ಬಿಗ್ ಬಾಸ್ ಸೀಸನ್ ನಲ್ಲಿ ಈ ಬಾರಿ ಹೆಚ್ಚು ಸದ್ದು ಮಾಡುತ್ತಿರುವುದು ಚೈತ್ರಾ ಕುಂದಾಪುರ ಮತ್ತು ಲಾಯರ್ ಜಗದೀಶ್. ಇಬ್ಬರೂ ಈಗ ಲೇಡಿ ಡಾನ್, ಮೇಲ್ ಡಾನ್ ಎಂಬ ಪಟ್ಟ ಬೇರೆ ಕೊಟ್ಟುಕೊಂಡಿದ್ದಾರೆ. ಮಾತುಗಾರಿಕೆಯಲ್ಲಿ ಇಬ್ಬರೂ ಒಬ್ಬರು ಇನ್ನೊಬ್ಬರನ್ನು ಮೀರಿಸುವಂತಿದ್ದಾರೆ.

ಲಾಯರ್ ಜಗದೀಶ್ ನನ್ನು ನೋಡಿದರೆ ಪ್ರಶಾಂತ್ ಸಂಬರಗಿ ನೆನಪಾಗುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಪ್ರಶಾಂತ್ ಸಂಬರಗಿಯಂತೆ ಜಗದೀಶ್ ಕೂಡಾ ತಾವು ಅಂದುಕೊಂಡಿದ್ದೇ ಸರಿ ಎಂದು ವಾದ ಮಾಡುತ್ತಿದ್ದಾರೆ. ಅವರಂತೇ ರೂಲ್ಸ್ ಬಗ್ಗೆ ಮಾತನಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಇನ್ನು, ಚೈತ್ರಾ ಕುಂದಾಪುರ ನಿನ್ನೆಯ ಎಪಿಸೋಡ್ ನಲ್ಲಿ ಮಾನಸಾ ಜೊತೆ ಕಿತ್ತಾಡಿದ್ದು ನೋಡಿದರೆ ಥೇಟ್ ಕಳೆದ ಸೀಸನ್ ನ ಸಿಂಹಿಣಿ ಎಂದೇ ಖ್ಯಾತರಾಗಿದ್ದ ಸಂಗೀತಾ ಶೃಂಗೇರಿ ನೆನಪಾಗುತ್ತಾರಂತೆ. ಇನ್ನು, ಭವ್ಯ ಶ್ರೀ ಗೌಡ ನೋಡಿದರೆ ನಮ್ರತಾ ನೆನಪಾಗುತ್ತಾರೆ ಎಂದವರಿದ್ದಾರೆ. ಅಂತೂ ಕಳೆದ ಸೀಸನ್ ನ ಹಲವು ಸ್ಪರ್ಧಿಗಳಿಗೆ ಈ ಸೀಸನ್ ನ ಸ್ಪರ್ಧಿಗಳನ್ನು ಕಂಪೇರ್ ಮಾಡಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments