Select Your Language

Notifications

webdunia
webdunia
webdunia
webdunia

ಅಮ್ಮನ ಬಗ್ಗೆ ಹಾಡಿಗೆ ನೃತ್ಯ ಮಾಡಿದ ಹುಡುಗನಿಗೆ ಕಿಚ್ಚ ಸುದೀಪ್ ಕೊಟ್ರು ಬೆಲೆ ಕಟ್ಟಲಾಗದ ಗಿಫ್ಟ್

Kiccha Sudeep

Krishnaveni K

ಬೆಂಗಳೂರು , ಸೋಮವಾರ, 27 ಜನವರಿ 2025 (14:15 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಕನ್ನಡ ಫೈನಲ್ ವೇದಿಕೆಯಲ್ಲಿ ಅಮ್ಮನ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ ಹುಡುಗನಿಗೆ ವೇದಿಕೆಯಲ್ಲೇ ಕಿಚ್ಚ ಸುದೀಪ್ ಬೆಲೆ ಕಟ್ಟಲಾಗದ ಉಡುಗೊರೆ ಕೊಟ್ಟರು.

ಕಿಚ್ಚ ಸುದೀಪ್ ಇತ್ತೀಚೆಗಷ್ಟೇ ತಾಯಿಯನ್ನು ಕಳೆದುಕೊಂಡಿದ್ದಾರೆ. ಅದೂ ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವಾಗಲೇ ಅವರ ತಾಯಿ ಪ್ರಾಣ ಬಿಟ್ಟಿದ್ದರು. ಹೀಗಾಗಿ ಬಿಗ್ ಬಾಸ್ ಫೈನಲ್ ವೇದಿಕೆಯಲ್ಲಿ ಕಿಚ್ಚನಿಗಾಗಿಯೇ ಅಮ್ಮನ ಕುರಿತಾ ಹಾಡೊಂದಕ್ಕೆ ಡ್ಯಾನ್ಸ್ ಮಾಡಿಸಲಾಗಿತ್ತು.

webdunia
Photo Credit: X
ಈ ನೃತ್ಯ ನೋಡುತ್ತಿದ್ದಂತೇ ಕಿಚ್ಚ ಸುದೀಪ್ ಗಳ ಗಳನೆ ಅತ್ತುಬಿಟ್ಟರು. ಅವರ ಜೊತೆಗೆ ಶೋ ನೋಡಲು ಬಂದಿದ್ದ ಸುದೀಪ್ ತಂದೆ ಸಂಜೀವ್ ಮತ್ತು ಮಗಳು ಸಾನ್ವಿ ಕೂಡಾ ಅಳುತ್ತಲೇ ಇದ್ದರು. ಈ ಹಾಡು ಸುದೀಪ್ ಹೃದಯವನ್ನು ತಟ್ಟಿತ್ತು.

ಹೀಗಾಗಿ ಡ್ಯಾನ್ಸ್ ಮುಗಿದೊಡನೆ ವೇದಿಕೆಗೆ ಬಂದ ಕಿಚ್ಚ ಸುದೀಪ್ ಭಾವುಕರಾಗಿ ಆ ಹುಡುಗನನ್ನು ಎತ್ತಿ ಮುದ್ದಾಡಿದ್ದಾರೆ. ಅಷ್ಟೇ ಅಲ್ಲ ಆ ಹುಡುಗನಿಗೆ ತಮ್ಮ ಕೈಯಲ್ಲಿದ್ದ ಬ್ರೇಸ್ ಲೆಟ್ ನ್ನೇ ಬಿಚ್ಚಿಕೊಟ್ಟಿದ್ದಾರೆ. ಈ ಬ್ರೇಸ್ ಲೆಟ್ ಸದಾ ಕಿಚ್ಚನ ಕೈಯಲ್ಲೇ ಇರುತ್ತದೆ. ಆದರೆ ತಮ್ಮ ಅಮ್ಮನ ಬಗ್ಗೆ ಡ್ಯಾನ್ಸ್ ಮಾಡಿ ಉಡುಗೊರೆ ಕೊಟ್ಟ ಹುಡುಗನಿಗೆ ಬೆಲೆ ಕಟ್ಟಲಾಗದ ಉಡುಗೊರೆ ಕೊಟ್ಟು ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

BBK11: ತಂದೆಯ ಮುಂದೆ ಯಾವತ್ತೂ ಹೀಗೆ ಮಾಡಿದವನಲ್ಲ ಎಂದು ವೇದಿಕೆಯಲ್ಲೇ ಕ್ಷಮೆ ಕೇಳಿದ ಕಿಚ್ಚ ಸುದೀಪ್