Webdunia - Bharat's app for daily news and videos

Install App

ಬಿಬಿಕೆ11: ನರಕಕ್ಕೆ ಬಂದರೂ ಕ್ಯಾಪ್ಟನ್ ಹಂಸಾಗೆ ತಪ್ಪಲಿಲ್ಲ ಜಗದೀಶ್ ಅಂಡರ್ ವೇರ್ ಕಾಟ

Krishnaveni K
ಸೋಮವಾರ, 7 ಅಕ್ಟೋಬರ್ 2024 (16:25 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಸ್ವರ್ಗದಲ್ಲಿದ್ದುಕೊಂಡು ಸ್ವರ್ಗ ನಿವಾಸಿಗಳೇ ನರಕ ತೋರಿಸಿದ್ದ ಜಗದೀಶ್ ಈ ವಾರ ನರಕ ವಾಸಿಯಾಗಿದ್ದಾರೆ. ಹಾಗಿದ್ದರೂ ಸ್ವರ್ಗ ವಾಸಿಗಳಿಗೆ ಕ್ವಾಟ್ಲೆ ಕೊಡೋದು ಮಾತ್ರ ತಪ್ಪಿಸಿಲ್ಲ.

ಕಳೆದ ವಾರ ಜಗದೀಶ್ ಎಲ್ಲಾ ಸ್ಪರ್ಧಿಗಳೊಂದಿಗೂ ಕಿತ್ತಾಡಿದ್ದರು. ಸ್ವರ್ಗದಲ್ಲಿದ್ದುಕೊಂಡೇ ನರಕ ವಾಸಿಗಳಿಗೆ ಸಹಾಯ ಮಾಡಿ ರೂಲ್ಸ್ ಬ್ರೇಕ್ ಮಾಡಿದ್ದರು. ಇದರಿಂದ ಮನೆಯವರೆಲ್ಲರೂ ಅವರ ಮೇಲೆ ಮುಗಿಬಿದ್ದಿದ್ದರು. ಅಷ್ಟೇ ಅಲ್ಲದೆ, ಅವರ ಮಾತು, ಬಳಸುವ ಶಬ್ಧ, ವೈಯಕ್ತಿಕವಾಗಿ ಮಾಡುವ ಟೀಕೆಗಳು ಹಾಗೂ ಎಲ್ಲರ ಎದುರೇ ಡ್ರೆಸ್ ಚೇಂಜ್ ಮಾಡ್ತಾರೆ ಎಂಬಿತ್ಯಾದಿ ದೂರುಗಳು ಮಹಿಳಾ ಸ್ಪರ್ಧಿಗಳಿಗಿತ್ತು.

ಈಗ ಅವರು ನರಕವಾಸಿಯಾದರೂ ಸ್ವರ್ಗ ವಾಸಿಗಳನ್ನು ಕಾಡುವುದನ್ನು ಬಿಟ್ಟಿಲ್ಲ. ಇಂದು ಹರಿಯಬಿಡಲಾಗಿರುವ ಪ್ರೋಮೋದಲ್ಲಿ ಜಗದೀಶ್ ತಮ್ಮ ಅಂಡರ್ ವೇರ್ ವಿಚಾರವಾಗಿ ಕ್ವಾಟ್ಲೆ ಕೊಡುತ್ತಾರೆ. ಸ್ವರ್ಗದಲ್ಲಿದ್ದ ಕಾರಣ ಅವರಿಗೆ ಸಂಬಂಧಿಸಿದ ವಸ್ತುಗಳೆಲ್ಲವೂ ಅಲ್ಲಿದೆ.

ಹೀಗಾಗಿ ಆ ವಸ್ತುಗಳನ್ನು ತರಲು ಕ್ಯಾಪ್ಟನ್ ಹಂಸಾಗೆ ಹೇಳುತ್ತಿದ್ದರು. ಈ ವೇಳೆ ನನ್ನ ಅಂಡರ್ ವೇರ್ ಒಂದು ಬಾಕಿಯಾಗಿದೆ. ಅದನ್ನು ನಾನೇ ತರುತ್ತೇನೆ. ದಯವಿಟ್ಟು ನೀವು ಮುಟ್ಟಬೇಡಿ. ಅದು ನನ್ನ ಪ್ರೈವೆಸಿ. ನಂಗೆ ಸರಿ ಹೋಗಲ್ಲ ಎಂದು ಹಂಸಗೆ ಕ್ವಾಟ್ಲೆ ಕೊಡುತ್ತಾರೆ. ಇಂದು ಈ ಎಪಿಸೋಡ್ ಪ್ರಸಾರವಾಗಲಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತ್ ಶೆಟ್ಟಿ ಎಲ್ಲಿ ಹೋಗಿದ್ದಾರೆ, ರಾಜ್ ಬಿ ಶೆಟ್ಟಿ ಕೊಟ್ರು ಅಪ್ ಡೇಟ್

ಕೂಲಿ ಸಿನಿಮಾ ಟಿಕೆಟ್ ದರ ಯದ್ವಾ ತದ್ವಾ ಏರಿಕೆ: ಕೇಳೋರೇ ಇಲ್ಲ

ನಟ ಧನುಷ್ ಜತೆ ಡೇಟಿಂಗ್ ವದಂತಿ, ಕೊನೆಗೂ ಮೌನ ಮುರಿದ ಮೃಣಾಲ್ ಠಾಕೂರ್‌

ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ಹಿರಿಯ ನಟಿ ಜಯಾ ಬಚ್ಚನ್ ಹೀಗೇ ನಡೆಸಿಕೊಳ್ಳುವುದಾ, ವಿಡಿಯೋ ವೈರಲ್

ಮುಂದಿನ ಸುದ್ದಿ
Show comments