BBK 11: ಕೊರಗಜ್ಜ ಸ್ವಾಮಿಯ ನೆನೆದು ಬಚಾವ್ ಆದ ಧನರಾಜ್ ಆಚಾರ್

Krishnaveni K
ಸೋಮವಾರ, 13 ಜನವರಿ 2025 (11:07 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ಈಗ ಕೊನೆಯ ಘಟ್ಟಕ್ಕೆ ಬಂದಿದ್ದು, ನಿನ್ನೆಯ ಎಪಿಸೋಡ್ ನಲ್ಲಿ ಚೈತ್ರಾ ಕುಂದಾಪುರ್ ಎಲಿಮಿನೇಟ್ ಆಗಿದ್ದಾರೆ. ಆದರೆ ಎಲಿಮಿನೇಷನ್ ತೂಗುಗತ್ತಿಯಲ್ಲಿದ್ದ ಧನರಾಜ್ ಆಚಾರ್ ಕೊರಗಜ್ಜ ಸ್ವಾಮಿಯ ನೆನೆದು ಬಚಾವ್ ಆಗಿದ್ದಾರೆ.

ಚೈತ್ರಾ ಕುಂದಾಪುರ ಮನೆಯಿಂದ ಹೊರ ಹೋಗುವಾಗ ತುಂಬಾ ಅತ್ತಿದ್ದರು. ಈ ಮನೆಯ ಅನ್ನದ ಋಣ ಮುಗಿಯಿತು ಎಂದು ಹೇಳುತ್ತಲೇ ಮನೆಯಿಂದ ಹೊರ ಹೋದರು. ವೇದಿಕೆಯಲ್ಲೂ ಫೈನಲ್ ತನಕ ಬರಲಾಗಲಿಲ್ಲ ಎಂದು ಬೇಸರ ಹೊರಹಾಕಿದ್ದರು.

ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕಿಚ್ಚ ಸುದೀಪ್ ಮನೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಂದು ಲಕೋಟೆಯಿದೆ. ಅದರಲ್ಲಿ ಸೇಫ್ ಆದವರ ಹೆಸರು ಇರುತ್ತದೆ ಎಂದಿದ್ದರು. ಧನರಾಜ್ ಮತ್ತು ಚೈತ್ರಾ ಮನೆಯೆಲ್ಲಾ ಹುಡುಕಾಡಿ ಪತ್ರ ಪತ್ತೆ ಹಚ್ಚಿದರು.

ಹೀಗೆ ಪತ್ರ ಹುಡುಕುವಾಗ ಧನರಾಜ್ ದಕ್ಷಿಣ ಕನ್ನಡದ ಪ್ರಸಿದ್ಧ ದೈವ ಕೊರಗಜ್ಜ ಸ್ವಾಮಿಯನ್ನು ನೆನೆಯುತ್ತಲೇ ಹುಡುಕಿದರು. ಕೊರಗಜ್ಜ ಸ್ವಾಮಿಗೆ ಭಕ್ತಿಯಿಂದ ಬೇಡಿಕೊಂಡರೆ ದೈವ ಈಡೇರಿಸುತ್ತದೆ ಎಂಬ ನಂಬಿಕೆ ವಿಶೇಷವಾಗಿ ದಕ್ಷಿಣ ಕನ್ನಡದವರಲ್ಲಿದೆ. ಇದೀಗ ಧನರಾಜ್ ಕೂಡಾ ಕೊರಜ್ಜ ಸ್ವಾಮಿಯನ್ನು ನೆನೆಸಿಕೊಂಡೇ ಪತ್ರ ಹುಡುಕಿದರು. ವಿಶೇಷ ಎಂದರೆ ಅವರು ಸೇಫ್ ಆದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಂಡಲೂರು ಮೃಗಲಾಯದಲ್ಲಿ ಶಿವಕಾರ್ತೀಕೇಯನ್ ದತ್ತು ಪಡೆದಿದ್ದ ಸಿಂಹ ಕೊನೆಗೂ ಪತ್ತೆ

ಸೋಮವಾರದ್ ಮೇಲ್ ನೋಡ್ರೀ, ಹೆಂಗ್ ಬಿದ್ದೋಗುತ್ತೆ ಅಂದೋರಿಗೆ: ದುನಿಯಾ ವಿಜಯ್‌ ಹೀಗಂದಿದ್ಯಾಕೆ

200 ಸಿನಿಮಾಗಳ ಕತೆ ಕೇಳಿದ ಬಳಿಕ ಒಪ್ಪಿಕೊಂಡ ಮುರುಳಿ ಸಿನಿಮಾಗೆ ಮುಹೂರ್ತ ಫಿಕ್ಸ್‌

ಮರೆಯಾದ ರಾಕೇಶ್‌ ಪೂಜಾರಿಯನ್ನು ನೆನೆದುಕೊಂಡ ಕಾಂತಾರ ನಟ ಗುಲ್ಶನ್ ದೇವಯ್ಯ

ದರ್ಶನ್ ಗೆ ಜೈಲಿನಲ್ಲಿ ಬೇಕಾದ್ದು ಕೊಡ್ತಿಲ್ಲ ಎಂದು ಕೋರ್ಟ್ ಗೆ ಅರ್ಜಿ

ಮುಂದಿನ ಸುದ್ದಿ
Show comments