ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರ ಈ ವಾರದ ವಾರದ ಕತೆ ಕಿಚ್ಚನ ಜೊತೆ ಪ್ರೋಮೋ ನೋಡಿದ ಮೇಲೆ ಅಭಿಮಾನಿಗಳು ಸುದೀಪ್ ಮೇಲೆ ಬೇಸರಗೊಂಡಿದ್ದಾರೆ. ರಂಜಿತ್ ಗೊಂದು ನ್ಯಾಯ, ರಜತ್ ಗೊಂದು ನ್ಯಾಯನಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ವಾರ ಧನರಾಜ್ ಮತ್ತು ರಜತ್ ನಡುವೆ ಕೈ-ಕೈ ಮಿಲಾಯಿಸುವ ಹಂತಕ್ಕೆ ವಾಗ್ವಾದ ನಡೆದಿತ್ತು. ನಾಮಿನೇಷನ್ ವಿಚಾರದಲ್ಲಿ ಮೊದಲು ಇಬ್ಬರೂ ಗಾರ್ಡನ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ರಜತ್ ಕೆನ್ನೆ ಮುಟ್ಟಿ ಮಾತನಾಡಿಸಿದ್ದು ರಜತ್ ಸಿಟ್ಟಿಗೆ ಕಾರಣವಾಗಿತ್ತು. ಈ ವೇಳೆ ಅವರು ಧನರಾಜ್ ಮೇಲೆ ಬಲಪ್ರಯೋಗ ಮಾಡಿದ್ದರು.
ಬಳಿಕ ಕಳಪೆ ಕೊಡುವಾಗಲೂ ಇದೇ ಕಾರಣವನ್ನಿಟ್ಟುಕೊಂಡು ಧನರಾಜ್ ಕಳಪೆ ನೀಡಿದಾಗ ಸಿಟ್ಟಿಗೆದ್ದ ರಜತ್ ಹೊಡೆದು ಹಾಕಿ ಬಿಡ್ತೀನಿ ಎಂದು ತಮ್ಮ ಸ್ಥಾನದಿಂದ ಎದ್ದು ಧನರಾಜ್ ಮೇಲೆ ಕೈ ಮಾಡಿದ್ದರು. ಈ ವಾರ ಸುದೀಪ್ ಈ ವಿಚಾರದಲ್ಲಿ ರಜತ್ ರನ್ನು ತರಾಟೆಗೆ ತೆಗೆದುಕೊಳ್ಳಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು.
ಆದರೆ ಸುದೀಪ್ ಮೊದಲು ಧನರಾಜ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಪ್ರವೋಕ್ ಮಾಡಿದ್ದು ಯಾಕೆ ಎನ್ನುತ್ತಾರೆ. ಬಳಿಕ ರಜತ್ ಗೆ ಏನು ಭಾಷೆ ನಿಮ್ದು ಎಂದು ಕ್ಲಾಸ್ ತೆಗೆದುಕೊಳ್ಳುತ್ತಾರೆ. ಕೊನೆಯಲ್ಲಿ ಇಬ್ಬರಿಗೂ ಒಂದು ಕೈ ಕೈ ಹಿಡಿದುಕೊಂಡೇ ಹೋಗುವ ಶಿಕ್ಷೆ ಕೊಟ್ಟು ಸುಮ್ಮನಾಗುತ್ತಾರೆ.