Publish Date: Sun, 21 Jan 2018 (13:07 IST)
Updated Date: Sun, 21 Jan 2018 (13:09 IST)
ಹೈದರಾಬಾದ್: ಬಾಹುಬಲಿ ಸಿನಿಮಾ ಹಿಟ್ ಆದ ಮೇಲೆ ಅದೆಷ್ಟು ಹುಡುಗಿಯರು ಪ್ರಭಾಸ್ ಫ್ಯಾನ್ ಆದರೋ. ಇದೀಗ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಮದುವೆ ವಿಷಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.
ಡಿಸೆಂಬರ್ ನಲ್ಲಿ ಪ್ರಭಾಸ್ ತಮ್ಮ ರೀಲ್ ಜೋಡಿ ಅನುಷ್ಕಾ ಶೆಟ್ಟಿ ಜತೆ ಹಸೆಮಣೆ ಏರುತ್ತಾರೆ ಎಂಬ ಸುದ್ದಿ ಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ಇದೀಗ ಅವರ ಕುಟುಂಬದವರೇ ಈ ವರ್ಷ ಪ್ರಭಾಸ್ ಮದುವೆಯಾಗುತ್ತಾರೆ ಎಂಬ ಸುದ್ದಿ ಹೇಳಿದ್ದಾರೆ.
ಪ್ರಭಾಸ್ ಕೂಡಾ ಮದುವೆಯಾಗಲು ಆಸಕ್ತಿ ಹೊಂದಿದ್ದಾರೆ. ಎಲ್ಲಾ ಸರಿ ಹೋದರೆ ಈ ವರ್ಷ ಗಟ್ಟಿಮೇಳ ಗ್ಯಾರಂಟಿ ಎಂದು ಅವರ ಮಾವ, ನಟ ಕೃಷ್ಣಮ್ ರಾಜು ಹೇಳಿದ್ದಾರೆ. ಆದರೆ ಹುಡುಗಿ ಅನುಷ್ಕಾನಾ ಅಥವಾ ಬೇರೆ ಯಾರಾದರಾ ಎಂದು ಇನ್ನೂ ಕನ್ ಫರ್ಮ್ ಆಗಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ