Publish Date: Sun, 31 Mar 2019 (09:09 IST)
Updated Date: Sun, 31 Mar 2019 (09:11 IST)
ಹೈದರಾಬಾದ್: ಬಾಹುಬಲಿ ಸಿನಿಮಾಗಾಗಿ ಪ್ರಭಾಸ್ ಕಷ್ಟಪಟ್ಟು ತಮ್ಮ ದೇಹ ಬೆಳೆಸಿಕೊಂಡಿದ್ದರು. ಆ ಸಿನಿಮಾದಲ್ಲಿ ಪ್ರಭಾಸ್ ಬಾಡಿ ಬಿಲ್ಡ್ ನೋಡಿ ವಾಹ್ ಎಂದವರು ಅದೆಷ್ಟು ಮಂದಿಯೋ.
ಆದರೆ ಈಗ ಪ್ರಭಾಸ್ ಅವರ ಆ ಸಿಕ್ಸ್ ಪ್ಯಾಕ್ ಬಾಡಿಗೆ ಕುತ್ತು ಬರುವ ಸಾಧ್ಯತೆ ಕಾಣುತ್ತಿದೆ. ಬಾಹುಬಲಿ ನಂತರ ಪ್ರಭಾಸ್ ಅಭಿನಯಿಸುತ್ತಿರುವ ‘ಸಾಹೋ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದೆ. ಉಳಿದ ಭಾಗದಲ್ಲಿ ಪ್ರಭಾಸ್ ದೇಹ ತೂಕ ಇಳಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
ಹೀಗಾಗಿ ಪ್ರಭಾಸ್ ಈಗ ಸ್ಟ್ರಿಕ್ ಆಗಿ ಡಯಟ್ ಮಾಡುತ್ತಿದ್ದಾರಂತೆ. ಅಲ್ಲದೆ, ನಿಯಮಿತವಾಗಿ ಜಿಮ್ ಗೆ ಹೋಗಿ ದೇಹ ಕರಗಿಸಿಕೊಳ್ಳುತ್ತಿದ್ದಾರಂತೆ. ಸಾಹೋ ಸಿನಿಮಾದ ಸಾಹಸ ದೃಶ್ಯಗಳು ನೈಜವಾಗಿ ಮೂಡಿಬರಲು ಈಗಾಗಲೇ ಪ್ರಭಾಸ್ ರಿಸ್ಕ್ ತೆಗೆದುಕೊಂಡು ಡ್ಯೂಪ್ ಬಳಸದೇ ಮಾಡಿ ಮುಗಿಸಿದ್ದಾರೆ ಎನ್ನಲಾಗಿದೆ. ಈಗ ಸಿನಿಮಾಗಾಗಿ ತಾವು ಕಷ್ಟಪಟ್ಟು ಬೆಳೆಸಿದ ದೇಹ ಕರಗಿಸಿಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ