ಕೀರ್ತಿ ಗೌಡ ಮೇಲೆ ಹಲ್ಲೆ ಪ್ರಕರಣ; ನಾಗರತ್ನ ಗೆ ಮಧ್ಯಂತರ ನಿರೀಕ್ಷಣಾ ಜಾಮೀನು

ಮಂಗಳವಾರ, 6 ನವೆಂಬರ್ 2018 (09:04 IST)
ಬೆಂಗಳೂರು : ನಟ ದುನಿಯಾ ವಿಜಯ್ ಅವರ  ಮೊದಲ ಪತ್ನಿ ನಾಗರತ್ನ ಅವರು ಎರಡನೇ ಪತ್ನಿ ಕೀರ್ತಿ ಗೌಡ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ನಾಗರತ್ನ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.


ದುನಿಯಾ ವಿಜಯ್ ಅವರು ಪಾನಿಪುರಿ ಕಿಟ್ಟಿ ಅಣ್ಣನ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ವೇಳೆ ದುನಿಯಾ ವಿಜಯ್ ಮನೆಗೆ ಬಂದಿದ್ದ ನಾಗರತ್ನ ಕೀರ್ತಿ ಗೌಡ ರ ಮೇಲೆ ಹಲ್ಲೆ ಮಾಡಿದ್ದರು. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಈ ದೃಶ್ಯವನ್ನು ವಿಜಯ್ ಪೊಲೀಸರಿಗೆ ನೀಡಿ ನಾಗರತ್ನ ವಿರುದ್ಧ ದೂರು ದಾಖಲಿಸಿದ ತಕ್ಷಣ ನಾಗರತ್ನ ನಾಪತ್ತೆಯಾಗಿದ್ದರು.


ಆದರೆ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಟಿ ನ್ಯಾಯಾಲಯ ನಾಗರತ್ನಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಜೊತೆಗೆ 50 ಸಾವಿರ ಮೊತ್ತದ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ಆದೇಶ ನೀಡಿದೆ. ಹಾಗೇ ಈ ಪ್ರಕರಣದ ಕುರಿತು ಪೋಲಿಸರ ವಿಚಾರಣೆ ವೇಳೆಯಲ್ಲಿ ಅದಕ್ಕೆ ಸಹಕರ ನೀಡಬೇಕು ಎಂದು ಹೇಳಿ, ನವೆಂಬರ‍್ 12 ಕ್ಕೆ ವಿಚಾರಣೆಯನ್ನು ಮುಂದೂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಾಲಿವುಡ್ ನಲ್ಲಿ ಅಚ್ಚರಿ ಮೂಡಿಸಿದೆ ನಟಿ ಅನನ್ಯಾ ಮಾಡಿದ ಮೀಟೂ ಆರೋಪ. ಯಾಕೆ ಗೊತ್ತಾ?