ಕಾಲಿವುಡ್ ನಲ್ಲಿ ಅಚ್ಚರಿ ಮೂಡಿಸಿದೆ ನಟಿ ಅನನ್ಯಾ ಮಾಡಿದ ಮೀಟೂ ಆರೋಪ. ಯಾಕೆ ಗೊತ್ತಾ?

ಮಂಗಳವಾರ, 6 ನವೆಂಬರ್ 2018 (08:58 IST)
ಚೆನ್ನೈ : ಸಿನಿಮಾರಂಗದಲ್ಲಿ ಇತ್ತೀಚೆಗೆ ಮೀಟೂ ಆರೋಪ ಜೋರಾಗಿ ಕೇಳಿಬರುತ್ತಿದೆ. ಆದರೆ ಇದೀಗ ದಕ್ಷಿಣದ ನಟಿಯೊಬ್ಬರು ಮಾಡಿದ ಮೀಟೂ ಆರೋಪ ಬಾರೀ ಅಚ್ಚರಿಯನ್ನುಂಟು ಮಾಡಿದೆ.


ಹೌದು. ತಮಿಳಿನ ನಟಿ ಅನನ್ಯಾ ರಾಮಪ್ರಸಾದ್, ‘ನಟಿ ಮಾಯಾ ಎಸ್ ಕೃಷ್ಣನ್ ನನಗೆ ಒತ್ತಡ ಹೇರುತ್ತಾ, ದೈಹಿಕ ಸಂಬಂಧ ಹೊಂದುವಂತೆ ಕಿರುಕುಳ ನೀಡುತ್ತಿದ್ದರು’ ಎಂದು ಹೇಳಿಕೆ ನೀಡಿದ್ದಾರೆ. ಇದು ಈಗ ಕಾಲಿವುಡ್ ನಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ.


ಅಲ್ಲದೇ ‘ಮಾಯಾ ಎಸ್ ಕೃಷ್ಣನ್ ಹೇಳುವಂತೆ ನಾನು ಯಾವುದೇ ದೈಹಿಕ ಸಂಪರ್ಕ ಹೊಂದಲು ಇಚ್ಛಿಸಲಿಲ್ಲ. ಆಕೆಯನ್ನು ದೂರಮಾಡಿದೆ’ ಎಂದು ಅನನ್ಯಾ ತಿಳಿಸಿದ್ದಾರೆ.


ನಟಿ ಮಾಯಾ ಎಸ್ ಕೃಷ್ಣನ್ 'ತೊದಾರಿ' ಮತ್ತು 'ವೆಟ್ಟೈಕರನ್' ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಯಾಗಬೇಕಿದ್ದ ರೊಬೋಟ್ 2.0 ರಲ್ಲಿ ಚಿಕ್ಕ ಪಾತ್ರದಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶಾರುಖ್ ಖಾನ್ ಮನೆಮುಂದೆ ಬ್ಲೇಡ್ ನಿಂದ ಕೈಕೊಯ್ದುಕೊಂಡ ಅಭಿಮಾನಿ. ಕಾರಣವೇನು ಗೊತ್ತಾ?