ಬೆಂಗಳೂರು: ಸ್ಯಾಂಡಲ್ ವುಡ್ ನಟಿಯರು ಕಾಲಿವುಡ್ ನಲ್ಲಿ ಅಭಿನಯಿಸುವುದು ಹೊಸದೇನಲ್ಲ. ಈಗ ನಟಿ ಆಶಿಕಾ ರಂಗನಾಥ್ ಕೂಡಾ ಅದೇ ಸಾಲಿಗೆ ಸೇರಿದ್ದಾರೆ.
ಅವರೀಗ ತಮಿಳು ಸಿನಿಮಾವೊಂದರಲ್ಲಿ ಅವಕಾಶ ಪಡೆದಿದ್ದು, ಈಗಾಗಲೇ ಶೂಟಿಂಗ್ ಆರಂಭವಾಗಿದೆ. ಈ ಮಾಹಿತಿಯನ್ನು ಖುದ್ದಾಗಿ ಅವರೇ ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದಾರೆ.
ನಟ ಅಥರ್ವ ಮುರಳಿ ಜೊತೆಗೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಕೂಡಾ ಪಾತ್ರ ಮಾಡುತ್ತಿದ್ದಾರೆ. ಕನ್ನಡದಲ್ಲಿ ಮದಗಜ ಸಿನಿಮಾ ಮುಗಿಸಿರುವ ಆಶಿಕಾ ತಮಿಳಿನಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರುವ ಖುಷಿಯಲ್ಲಿದ್ದಾರೆ.