Publish Date: Wed, 08 Sep 2021 (17:29 IST)
Updated Date: Wed, 08 Sep 2021 (17:31 IST)
ಬೆಂಗಳೂರು: ಡ್ರಗ್ ಕೇಸ್ ನಲ್ಲಿ ಸಿಸಿಬಿ ಪೊಲೀಸರು ಆಂಕರ್ ಅನುಶ್ರೀ ಹೆಸರು ಕೈ ಬಿಡುತ್ತಿದ್ದಂತೇ ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಹಲವು ಪ್ರಶ್ನೆಗಳನ್ನಿಟ್ಟಿದ್ದಾರೆ.
ಡ್ರಗ್ ಕೇಸ್ ನಲ್ಲಿ ಬಂಧಿತರಾಗಿದ್ದ ನಟಿಯರಾದ ರಾಗಿಣಿ, ಸಂಜನಾ ಹೇರ್, ಯೂರಿನ್ ಟೆಸ್ಟ್ ಮಾಡಿಸಲಾಗಿತ್ತು. ಆದರೆ ಅನುಶ್ರೀ ಮೇಲೆ ಆರೋಪ ಕೇಳಿಬಂದಾಗ ಅವರ ಕೂದಲು ಮಾದರಿ ಪರೀಕ್ಷೆ ಯಾಕೆ ನಡೆಸಲಿಲ್ಲ ಎಂದು ಇಂದ್ರಜಿತ್ ಪ್ರಶ್ನೆ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಪ್ರಕರಣ ಆರೋಪ ಕೇಳಿಬಂದಾಗ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿದ್ದ ಇಂದ್ರಜಿತ್ ತಮಗೆ ಗೊತ್ತಿರುವ ಮಾಹಿತಿ ನೀಡಿದ್ದರು.