Publish Date: Thu, 21 Apr 2022 (07:50 IST)
Updated Date: Thu, 21 Apr 2022 (07:52 IST)
ಬೆಂಗಳೂರು: ಇಷ್ಟು ದಿನ ಕನ್ನಡದಲ್ಲಿ ಹಲವಾರು ಹಿಟ್ ಹಾಡುಗಳನ್ನು ನೀಡಿ ಮನೆ ಮಾತಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಈಗ ತಮಿಳಿಗೆ ಕಾಲಿಡುತ್ತಿದ್ದಾರೆ.
ಕನ್ನಡದವರೇ ಆದ ಪ್ರಶಾಂತ್ ರಾಜ್ ತಮಿಳಿನಲ್ಲಿ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಲಿದ್ದಾರೆ ಎಂಬ ಸುದ್ದಿಯಿದೆ.
ಪ್ರಶಾಂತ್ ರಾಜ್ ಮತ್ತು ಅರ್ಜುನ್ ಜನ್ಯಾ ಇಬ್ಬರಿಗೂ ಇದು ಮೊದಲ ತಮಿಳು ಚಿತ್ರ. ಇಷ್ಟು ದಿನ ಕನ್ನಡದಲ್ಲಿ ಮೋಡಿ ಮಾಡಿದ್ದ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ಈಗ ತಮಿಳಿನಲ್ಲಿ ಕ್ಲಿಕ್ ಆಗುತ್ತಾರಾ ಕಾದು ನೋಡಬೇಕಿದೆ.