Select Your Language

Notifications

webdunia
webdunia
webdunia
webdunia

ಮಾರ್ಟಿನ್ ಚಿತ್ರತಂಡದಲ್ಲಿ ಬಿರುಕು ವದಂತಿಗೆ ನಿರ್ದೇಶಕ ಎಪಿ ಅರ್ಜುನ್ ಸ್ಪಷ್ಟನೆ

AP Arjun

Krishnaveni K

ಬೆಂಗಳೂರು , ಶುಕ್ರವಾರ, 19 ಏಪ್ರಿಲ್ 2024 (10:42 IST)
Photo Courtesy: Twitter
ಬೆಂಗಳೂರು: ಧ‍್ರುವ ಸರ್ಜಾ ನಾಯಕರಾಗಿರುವ ಮಾರ್ಟಿನ್ ಸಿನಿಮಾ ತಂಡದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರ ನಡುವೆ ವೈಮನಸ್ಯ ಮೂಡಿದೆ. ಇಬ್ಬರೂ ಫಿಲಂ ಚೇಂಬರ್ ಗೆ ದೂರು ಕೊಟ್ಟಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಈಗ ನಿರ್ದೇಶಕ ಎಪಿ ಅರ್ಜುನ್ ಸ್ಪಷ್ಟನೆ ನೀಡಿದ್ದಾರೆ.

ನಿರ್ಮಾಪಕ ಉದಯ್ ಕೆ ಮಹ್ತಾ ಜೊತೆ ಲೈವ್ ಬಂದ ನಿರ್ದೇಶಕ ಎಪಿ ಅರ್ಜುನ್ ನಮ್ಮ ನಡುವೆ ಯಾವುದೇ ವೈಮನಸ್ಯಗಳಿಲ್ಲ. ಯಾರೋ  ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದಕ್ಕೆಲ್ಲಾ ಕಿವೊಗಡಬೇಡಿ. ನಾವು ಫಿಲಂ ಚೇಂಬರ್ ಗೆ ದೂರು ನೀಡಿದ್ದು ನಿಜ. ಆದರೆ ಅದು ಈ ಕಾರಣಕ್ಕೆ ಅಲ್ಲ. ಸಿಜಿ ಕೆಲಸದಲ್ಲಿ ಸಮಸ್ಯೆಯಾಗಿದ್ದರಿಂದ ಫಿಲಂ ಚೇಂಬರ್ ಗೆ ದೂರು ನೀಡಿದ್ದೆವು. ತಪ್ಪು ಮಾಹಿತಿ ಸ್ಪ್ರೆಡ್ ಮಾಡಬೇಡಿ. ನಮ್ಮ ಮಧ್ಯೆ ಕಿತ್ತಾಟವಿಲ್ಲ’ ಎಂದಿದ್ದಾರೆ.

ಇನ್ನು ನಿರ್ಮಾಪಕ ಉದಯ್ ಕೆ ಮೆಹ್ತಾ ಕೂಡಾ ಮಾತನಾಡಿದ್ದು, ದಯವಿಟ್ಟು ಯಾರೂ ತಪ್ಪು ಮಾಹಿತಿ ಹರಬೇಡಿ. ಈಗಷ್ಟೇ ಡಬ್ಬಿಂಗ್ ಮಾಡಿ ಬಂದಿದ್ದೇವೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದಿದ್ದಾರೆ.

ಮಾರ್ಟಿನ್ ಸಿನಿಮಾ ಶುರುವಾಗಿ ಎರಡು ವರ್ಷವೇ ಕಳೆದಿದೆ. ಇನ್ನೂ ಚಿತ್ರತಂಡ ಬಿಡುಗಡೆ ಬಗ್ಗೆ ಮಾತನಾಡುತ್ತಿಲ್ಲ. ಒಂದು ಸಣ್ಣ ತುಣುಕು ಬಿಟ್ಟಿದ್ದು ಬಿಟ್ಟರೆ ಮಾರ್ಟಿನ್ ಕಡೆಯಿಂದ ಯಾವುದೇ ಸುದ್ದಿಯಿಲ್ಲ. ಹೀಗಾಗಿ ಸಹಜವಾಗಿಯೇ ಚಿತ್ರದ ಬಗ್ಗೆ ಒಂದಿಲ್ಲೊಂದು ರೂಮರ್ ಗಳು ಕೇಳಿಬರುತ್ತಲೇ ಇವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತದಾನಕ್ಕೆ ಸಿನಿಮಾ ಶೂಟಿಂಗ್‌ನಿಂದ ಬ್ರೇಕ್ ಪಡೆದು ರಷ್ಯಾದಿಂದ ಹೊರಟ ದಳಪತಿ ವಿಜಯ್