Select Your Language

Notifications

webdunia
webdunia
webdunia
webdunia

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

Amruthadhare serial

Krishnaveni K

ಬೆಂಗಳೂರು , ಗುರುವಾರ, 10 ಜುಲೈ 2025 (13:00 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್ ನಲ್ಲಿ ಕೊನೆಗೂ ನಾಯಕಿ ಭೂಮಿಕಾಗೆ ಡೆಲಿವರಿಯಾಗಿದೆ. ಈ ಪ್ರೋಮೋ ನೋಡಿ ವೀಕ್ಷಕರು ಮಾಡಿರುವ ಕಾಮೆಂಟ್ ನೋಡಿದ್ರಂತೂ ನಗುವೋ ನಗು...

ಅಮೃತಧಾರೆ ಧಾರವಾಹಿಯಲ್ಲಿ ಈಗ ಕತೆ ರೋಚಕ ಘಟ್ಟದಲ್ಲಿದೆ. ತುಂಬು ಗರ್ಭಿಣಿ ಭೂಮಿಕಾಗೆ ಶಕುಂತಲಾ ಸಂಚಿನಿಂದ ಜಾಂಡೀಸ್ ಬರುತ್ತದೆ. ಇದಕ್ಕೆ ನಾಟಿ ಔಷಧ ಮಾಡಲು ಕಾಡಿನ ದಾರಿಯಲ್ಲಿ ಹೋಗುವಾಗ ಶಕುಂತಲಾ ಕಳುಹಿಸಿದ ದುಷ್ಟರ ಕೈಗೆ ಗೌತಮ್-ಭೂಮಿಕಾ ಸಿಲುಕುತ್ತಾರೆ. ಅವರನ್ನು ಅಣ್ಣಯ್ಯ ಧಾರವಾಹಿ ಹೀರೋ ಅಣ್ಣಯ್ಯ ಬಂದು ರಕ್ಷಿಸುತ್ತಾನೆ.

ಕಾಡಿನಲ್ಲಿದ್ದಾಗ ಭೂಮಿಕಾಗೆ ಹೆರಿಗೆ ನೋವು ಬರುತ್ತದೆ. ಅವಳನ್ನು ಅಣ್ಣಯ್ಯನೇ ತನ್ನ ಹೆಂಡತಿ ಪಾರ್ವತಿ ಜೊತೆಗೂಡಿ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಇಲ್ಲೂ ರೌಡಿಗಳ ಕಾಟ ತಪ್ಪುವುದಿಲ್ಲ. ಆದರೆ ಅವರಿಂದ ಅಣ್ಣಯ್ಯ ಅವರನ್ನು ರಕ್ಷಿಸುತ್ತಾನೆ.  ಭೂಮಿಕಾ ಡೆಲಿವರಿ ಮಾಡಲು ಕರ್ಣ ಧಾರವಾಹಿ ಹೀರೋ ಡಾಕ್ಟರ್ ಕರ್ಣ ಬರುತ್ತಾನೆ. ಹೆರಿಗೆಯಲ್ಲಿ ಕಾಂಪ್ಲಿಕೇಷನ್ ಇದ್ದರೂ ಕರ್ಣ ಕೈಚಳಕದಿಂದ ಭೂಮಿಕಾಗೆ ಯಶಸ್ವಿಯಾಗಿ ಡೆಲಿವರಿಯಾಗುತ್ತದೆ.

ಇದೀಗ ಗೌತಮ್ ಕೈಯಲ್ಲಿ ಮಗು ಇರುವ ಪ್ರೋಮೋ ನೋಡಿ ವೀಕ್ಷಕರ ಖುಷಿಗೆ ಪಾರವೇ ಇಲ್ಲದಂತಾಗಿದೆ. ಇಷ್ಟು ದಿನ ಭೂಮಿಕಾ ಹೊಟ್ಟೆಗೆ ಆ ತಲೆದಿಂಬು ಕಟ್ಟಿಕೊಂಡು ಗಜ ನಡಿಗೆ ನಡೆಯುವುದನ್ನು ನೋಡಲಾಗುತ್ತಿರಲಿಲ್ಲ. ಇನ್ನೀಗ ಆ ತಲೆದಿಂಬಿಗೆ ಮುಕ್ತಿ ಸಿಕ್ತು ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಅಂತೂ ಕನ್ನಡ ಧಾರವಾಹಿಗಳಲ್ಲಿ ನಾಯಕಿಗೆ ಯಶಸ್ವಿಯಾಗಿ ಮಗು ಡೆಲಿವರಿಯಾಗಿ ಭೂಮಿಕಾ ಇತಿಹಾಸ ಸೃಷ್ಟಿಸಿದ್ರು ಎಂದು ಕಾಲೆಳೆದಿದ್ದಾರೆ. ಮತ್ತೆ ಕೆಲವರು ಏನು ಮಗು? ಮಗು ನೋಡಿದ್ರೆ ಇಷ್ಟು ದೊಡ್ಡದಾಗಿದೆ. ಥೇಟ್ ಡುಮ್ಮ ಸರ್ ಬಿಡಿ ಎಂದು ತಮಾಷೆ ಮಾಡಿದ್ದಾರೆ. ಇನ್ನು ಜೀ ಕನ್ನಡದಲ್ಲಿ ಯಾರಿಗೂ ಮಗು ಸಾಯಲ್ಲ. ಯಾಕೆಂದರೆ ಡೆಲಿವರಿ ಮಾಡಿಸಲು ಡಾಕ್ಟರ್ ಕರ್ಣ ಇದ್ದಾರೆ ಎಂದು ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ