Select Your Language

Notifications

webdunia
webdunia
webdunia
webdunia

ಅಮೃತಧಾರೆ ಭೂಮಿಕಾಗೆ ಹೆರಿಗೆ ಮಾಡಿಸಲು ಬಂದ್ರು ಹೀರೋಗಳು: ಕಾಮೆಂಟ್ಸ್ ಮಾತ್ರ ಕೇಳಲೇಬೇಡಿ

Amruthadhare serial

Krishnaveni K

ಬೆಂಗಳೂರು , ಶುಕ್ರವಾರ, 4 ಜುಲೈ 2025 (14:40 IST)
ಬೆಂಗಳೂರು: ಅಮೃತಧಾರೆ ಧಾರವಾಹಿ ಈಗ ರೋಚಕ ಘಟ್ಟಕ್ಕೆ ಬಂದಿದ್ದು ನಾಯಕಿ ಭೂಮಿಕಾಗೆ ಡೆಲಿವರಿ ಮಾಡಿಸಲು ಜೀ ವಾಹಿನಿಯ ಎಲ್ಲಾ ಹೀರೋಗಳು ಬಂದಿದ್ದಾರೆ. ಈ ಒಂದು ಪ್ರೋಮೋ ಹೊರಬೀಳುತ್ತಿದ್ದಂತೇ ವೀಕ್ಷಕರ ಕಾಮೆಂಟ್ ನೋಡದರೆ ಮಾತ್ರ ಹೊಟ್ಟೆ ಹುಣ್ಣಾಗುವಂತೆ ನಗುತ್ತೀರಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್ ನ ಹೊಸ ಪ್ರೋಮೋ ಒಂದು ಹೊರಬಂದಿದೆ. ಇದರಲ್ಲಿ ತುಂಬಿ ಗರ್ಭಿಣಿ ಭೂಮಿಕಾಗೆ ಕೇಡಿ ಶಕುಂತಲಾ ನೀಡುವ ವಿಷದಿಂದಾಗಿ ಜಾಂಡೀಸ್ ಬಂದಿರುತ್ತದೆ. ಇದನ್ನು  ಗುಣಪಡಿಸಲು ಅಜ್ಜಿ ಕಾಡಿಗೆ ಹೋಗಿ ನಾಟಿ ಔಷಧ ಮಾಡಿಸಲು ಹೊರಟಿರುತ್ತಾರೆ.

ದಾರಿ ಮಧ್ಯೆ ಜಯದೇವ್ ಕಳುಹಿಸಿದ ಗೂಂಡಾಗಳು ಅಟ್ಯಾಕ್ ಮಾಡುತ್ತಾರೆ. ಈ ವೇಳೆ ಭೂಮಿಕಾಗೆ ಹೆರಿಗೆ ನೋವು ಬರುತ್ತದೆ. ಕಾಡಿನಲ್ಲಿ ಹೆರಿಗೆ ಮಾಡಿಸಲು ಕರ್ಣ ಧಾರವಾಹಿಯ ಹೀರೋ ಡಾ ಕರ್ಣ, ಅಣ್ಣಯ್ಯ ಧಾರವಾಹಿ ನಾಯಕಿ ಡಾ ಪಾರ್ವತಿ ಬರುತ್ತಾರೆ. ಗೂಂಡಾಗಳ ಜೊತೆ ಗೌತಮ್ ಗೆ ಹೊಡೆದಾಡಲು ಅಣ್ಣಯ್ಯ ನೆರವಾಗುತ್ತಾನೆ.

ಇಂತಹದ್ದೊಂದು ಪ್ರೋಮೋ ಬಿಡುತ್ತಿದ್ದಂತೇ ವೀಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದು ಟ್ರೋಲ್ ಮಾಡಿದ್ದಾರೆ. ಈ ಕಾಲದಲ್ಲೂ ಜಾಂಡೀಸ್ ಬಂದರೆ ಕಾಡಿಗೆ ಟ್ರೀಟ್ ಮೆಂಟ್ ಕೊಡಿಸಲು ಹೋಗಬೇಕಾ? ಅಬ್ಬಾ ಯಾವ ಕಾಲದಲ್ಲಿದ್ದಾರೆ ಇವರು ಎಂದು ಒಬ್ಬರು ಕಾಲೆಳೆದರೆ ಮತ್ತೆ ಕೆಲವರು ಅಂತೂ ನಾವು ಅಂದುಕೊಂಡಿದ್ದು ನಿಜವಾಯಿತು. ಭೂಮಿಕಾಗೆ ಡೆಲಿವರಿ ಮಾಡಿಸಲು ಡಾ ಕರ್ಣನೇ ಬರಬೇಕಾಯಿತು ಎಂದು ಕೆಲವರು ಹೇಳಿದ್ದಾರೆ. ಒಬ್ಬರಂತೂ ಡಾ ಕರ್ಣನೇ ಹೆರಿಗೆ ಮಾಡಿಸಲು ಸರಿ.. ಅವನಂತೂ ರೋಡ್ ನಲ್ಲೂ ಹೆರಿಗೆ ಮಾಡಿಸ್ತಾನೆ ಎಂದು ಕಾಲೆಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐವಿಎಫ್ ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾ ರಾಮಣ್ಣ